ಇಫ್ತಾರ್ ಕೂಟದಲ್ಲಿ ಪ್ರಧಾನಿ ಪತ್ನಿ ಭಾಗಿಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟ'ಹೌ ಸ್ವೀಟ್' ಎಂದು ಟ್ವಿಟ್ ಮಾಡಿದ ಕಾಂಗ್ರೆಸ್
ಅಹಮದಾಬಾದ್(ಜೂ.14): ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾಬೆನ್ ಅಹಮದಾಬಾದ್‌ನಲ್ಲಿ ಇಂದು ನಡೆದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು. ನಗರದ ರಿಲೀಫ್ ರೋಡ್ ಪ್ರದೇಶದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದ ಜಶೋದಾಬೆನ್, ರಂಜಾನ್ ಉಪವಾಸದಲ್ಲಿ ನಿರತರಾದವರ ಜೊತೆ ಮಾತನಾಡಿದರು.
ಜಶೋದಾ ಬೆನ್ ಇಫ್ತಾರ್ ನಲ್ಲಿ ಭಾಗಿಯಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಜಶೋದಾಬೆನ್ ಅವರ ಭೇಟಿಯನ್ನು ಕೊಂಡಾಡಿದೆ. ಆದರೆ ಇದೇ ವೇಳೆ ವ್ಯಂಗ್ಯಭರಿತವಾಗಿ ಹೌ ಸ್ವೀಟ್ ಎಂದು ಕೂಡ ಟ್ವಿಟ್ ಮಾಡಿದೆ. ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ದಿವ್ಯ ಸ್ಪಂದನ (ರಮ್ಯಾ) ಜಶೋದಾಬೆನ್ ಇಫ್ತಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಚಿತ್ರವನ್ನು ರಿಟ್ವೀಟ್ ಮಾಡಿದ್ದು ಹೌ ಸ್ವೀಟ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರೂರಾದ ವಡ್ ನಗರದಿಂದ 35 ಕಿಮೀ ದೂರದಲ್ಲಿರುವ ಬ್ರಹ್ಮನ್ವಾಡ ಎಂಬಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಶೋದಾಬೆನ್ ಈಗ ನಿವೃತ್ತರಾಗಿದ್ದಾರೆ.
