ಪೋರ್ಟ್‌ಬ್ಲೇರ್: ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್- ನಿಕೋಬಾರ್‌ನ ಮೂರು ದ್ವೀಪಗಳಿಗೆ ಹೊಸ ಹೆಸರು ನಾಮಕರಣ ಮಾಡಿದ್ದಾರೆ. 

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಂಡಮಾನ್‌ಗೆ ಭೇಟಿ ನೀಡಿದ 75 ನೇ ವರ್ಷಾಚರಣೆ ಕಾರ್ಯಕ್ರಮದ ನಿಮಿತ್ತ ಆಜಾದ್ ಹಿಂದ್ ಫೌಜ್ ಯ ಟೋಪಿ ಧರಿಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

 ರೋಸ್ ಐಲ್ಯಾಂಡ್‌ನ ಹೆಸರನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಐಲ್ಯಾಂಡ್ ಎಂದೂ, ಹ್ಯಾವ್‌ಲಾಕ್ ದ್ವೀಪದ ಹೆಸರನ್ನು ಸ್ವರಾಜ್ ಎಂದೂ, ನೀಲ್ ಐಲ್ಯಾಂಡ್ ಹೆಸರನ್ನು ಶಹೀದ್ ಐಲ್ಯಾಂಡ್ ಎಂದೂ ಮರು ನಾಮಕರಣಗೊಳಿಸಿದರು.