'ನಮೋ' ರ್ಯಾಲಿಗೆ 4 ಲಕ್ಷ ಸೇರಿಸಲು ಭರ್ಜರಿ ಸಿದ್ಧತೆ

news | Wednesday, January 31st, 2018
Suvarna Web Desk
Highlights

ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವು ಫೆ.4 ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಸುಮಾರು 4 ಲಕ್ಷ ಕಾರ್ಯಕರ್ತರನ್ನು ಕರೆತರುವ ಪ್ರಯತ್ನ ಪಕ್ಷದಿಂದ ನಡೆದಿದೆ.

ಬೆಂಗಳೂರು (ಜ.31): ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವು ಫೆ.4 ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಸುಮಾರು 4 ಲಕ್ಷ ಕಾರ್ಯಕರ್ತರನ್ನು ಕರೆತರುವ ಪ್ರಯತ್ನ ಪಕ್ಷದಿಂದ ನಡೆದಿದೆ.

ಅರಮನೆ ಮೈದಾನದಲ್ಲಿ ಈ ಸಮಾರಂಭಕ್ಕೆ ಭಾರೀ ಸಿದ್ಧತೆ ನಡೆಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಕಾರ್ಯಕರ್ತರು ಆಗಮಿಸಲಿದ್ದು, ಸರ್ಕಾರಿ ಬಸ್‌ಗಳನ್ನು ಈಗಾಗಲೇ ಬುಕ್ಕಿಂಗ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವುದರಿಂದ ಯಾವುದೇ ಸಮಸ್ಯೆಯಾಗದಂತೆ ಯಶಸ್ವಿಗೊಳಿಸಲು ರಾಜ್ಯದ ನಾಯಕರು ಪಣತೊಟ್ಟಿದ್ದು, ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಸಮಾವೇಶದಲ್ಲಿ 4 ಲಕ್ಷ ಕಾರ್ಯಕರ್ತರು, ಬೆಂಬಲಿಗರನ್ನು ಸೇರಿಸಲು ಬಿಜೆಪಿ ಮುಖಂಡರು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಈವರೆಗೆ ಕೆಎಸ್‌'ಆರ್‌'ಟಿಸಿಯ 80 ಹಾಗೂ ಬಿಎಂಟಿಸಿಯಿಂದ ಸುಮಾರು  350 ಬಸ್'ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ರಾಜ್ಯದ ವಿವಿಧೆಡೆಯಿಂದ ಕಾರ್ಯಕರ್ತರನ್ನು ಕರೆ ತರಲು ಕೆಎಸ್‌ಆರ್‌ಟಿಸಿಯ 4 ವಿಭಾಗಗಳಿಂದಲೂ ಬಸ್'ಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ನೂರಾರು ಖಾಸಗಿ  ವಾಹನ ಕಾದಿರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸಮಾವೇಶವನ್ನು ಯಶಸ್ವಿಗೊಳಿಸುವ ಸಂಬಂಧ ದೆಹಲಿಯಲ್ಲಿ ಸೋಮವಾರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸೇರಿದಂತೆ ಇತರೆ ಮುಖಂಡರ ಸಮ್ಮುಖದಲ್ಲಿ ರಾಜ್ಯದ ನಾಯಕರೊಂದಿಗೆ ಸಭೆ ನಡೆಸಲಾಯಿತು.

 

Comments 0
Add Comment

  Related Posts

  Shreeramulu and Tippeswamy supporters clash

  video | Friday, April 13th, 2018

  BJP MLA Video Viral

  video | Friday, April 13th, 2018

  Election Encounter With Eshwarappa

  video | Thursday, April 12th, 2018

  Election Encounter With Eshwarappa

  video | Thursday, April 12th, 2018

  Shreeramulu and Tippeswamy supporters clash

  video | Friday, April 13th, 2018
  Suvarna Web Desk