ಪ್ರಧಾನಿ ನರೇಂದ್ರ ಮೋದಿ ಆಧಾರ್ ಕಾರ್ಡ್ ಆಧಾರಿತ ಭೀಮ್ (ಭಾರತ್ ಇಂಟರ್ ಫೇಸ್ ಫಾರ್ ಮನಿ) ಎನ್ನುವ ಮೊಬೈಲ್ ಪಾವತಿ ಅಪ್ಲಿಕೇಶನ್ ಒಂದನ್ನು ಇಂದು ಬಿಡುಗಡೆ ಮಾಡಿದ್ದಾರೆ.

ನವದೆಹಲಿ (ಡಿ. 30): ಪ್ರಧಾನಿ ನರೇಂದ್ರ ಮೋದಿ ಆಧಾರ್ ಕಾರ್ಡ್ ಆಧಾರಿತ ಭೀಮ್ (ಭಾರತ್ ಇಂಟರ್ ಫೇಸ್ ಫಾರ್ ಮನಿ) ಎನ್ನುವ ಮೊಬೈಲ್ ಪಾವತಿ ಅಪ್ಲಿಕೇಶನ್ ಒಂದನ್ನು ಇಂದು ಬಿಡುಗಡೆ ಮಾಡಿದ್ದಾರೆ.

ಇಲ್ಲಿನ ತಲ್ಕಾತೋರಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಧನ್ ಮೇಳದಲ್ಲಿ ಮೋದಿ ಭೀಮ್ ಎನ್ನುವ ಹೊಸ ಆ್ಯಪ್ ನ್ನು ಬಿಡುಗಡೆ ಮಾಡಿದ್ದಾರೆ. ನಂತರ ಲಕ್ಕಿ ಗ್ರಾಹಕ ಯೋಜನೆಯ ವಿಜೇತರನ್ನು ಘೋಷಿಸಿದ್ದಾರೆ.

ನೂತನ ಆ್ಯಪ್ ಪ್ಲಾಸ್ಟಿಕ್ ಕಾರ್ಡುಗಳ ಬಳಕೆಯನ್ನು ತಗ್ಗಿಸಲಿದೆ. ಮಾಸ್ಟರ್ ಕಾರ್ಡ್ ಅಥವಾ ವೀಸಾಕಾರ್ಡ್ ಗಳ ಶುಲ್ಕ ಪಾವತಿಯನ್ನು ತೊಡೆದು ಹಾಕಲಿದೆ. ಹಳ್ಳಿ ಹಳ್ಳಿಗಳಲ್ಲಿರುವ ವ್ಯಾಪಾರಿಗಳಿಗೆ, ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ. ಈ ಆ್ಯಪ್ ಅಂಡ್ರಾಯ್ಡ್ ಪೋನ್ ಗಳಲ್ಲಿ ಮಾತ್ರ ಲಭ್ಯವಿದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?

ವ್ಯಾಪಾರಿಗಳು ತಮ್ಮ ಅಂಡ್ರಾಯ್ಡ್ ಫೋನ್ ಗೆ ಆಧಾರ್ ನಗದುರಹಿತ ಮರ್ಚೆಂಟ್ ಆ್ಯಪನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಬಯೋಮೆಟ್ರಿಕ್ ರೀಡರನ್ನು ಕನೆಕ್ಟ್ ಮಾಡಬೇಕು. ನಂತರ ತಮ್ಮ ಆಧಾರ್ ಸಂಖ್ಯೆಯನ್ನು ಫೀಡ್ ಮಾಡಬೇಕು. ಬಳಿಕ ನೀವು ವ್ಯವಹರಿಸುವ ಬ್ಯಾಂಕ್ ಶಾಖೆಯನ್ನು ಆಯ್ಕೆ ಮಾಡಬೇಕು. ಆಗ ಒಂದು ಅಧಿಕೃತ ಪಾಸ್ ವರ್ಡನ್ನು ಬಯೋಮೆಟ್ರಿಕ್ ನೀಡಲಿದೆ.