ಟ್ವಿಟರ್’ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜನಪ್ರಿಯತೆ ಹೆಚ್ಚಾದ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯ ಎಂಬ ಖ್ಯಾತಿ ಉಳಿಸಿಕೊಂಡಿದ್ದಾರೆ.
ನವದೆಹಲಿ(ಡಿ.6): ಟ್ವಿಟರ್’ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜನಪ್ರಿಯತೆ ಹೆಚ್ಚಾದ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯ ಎಂಬ ಖ್ಯಾತಿ ಉಳಿಸಿಕೊಂಡಿದ್ದಾರೆ.
2016ರಲ್ಲಿ 2.46 ಕೋಟಿ ಇದ್ದ ಮೋದಿ ಹಿಂಬಾಲಕರ ಸಂಖ್ಯೆ 2017 ಡಿ.4ರ ವರೆಗೆ 3.75 ಕೋಟಿಗೆ ಏರಿಕೆಯಾಗಿದೆ.
ಅಂದರೆ ಮೋದಿ ಹಿಂಬಾಲಕರ ಪ್ರಮಾಣ ಶೇ.52ರಷ್ಟು ಹೆಚ್ಚಿದೆ. ಇದೇ ಅವಯಲ್ಲಿ ಕೊಹ್ಲಿ ಹಿಂಬಾಲಕರ ಪ್ರಮಾಣ ಶೇ.61ರಷ್ಟು ಹೆಚ್ಚಿದ್ದು, 1.29 ಕೋಟಿಯಿಂದ 2.08 ಕೋಟಿ ತಲುಪಿದೆ.
