ಆಹಾರ ವಸ್ತುಗಳ ಮಾರಾಟದ ಕಮಿಷನ್‌ ಮೊತ್ತ ಹೆಚ್ಚಳ ಸೇರಿದಂತೆ ನ್ಯಾಯಬೆಲೆ ಅಂಗಡಿಕಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾ.1ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳುವುದಾಗಿ ಬಿಜೆಪಿ ಗುಜರಾತ್‌ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಎಚ್ಚರಿಕೆ ನೀಡಿದ್ದಾರೆ.

ಅಹಮದಾಬಾದ್‌: ಆಹಾರ ವಸ್ತುಗಳ ಮಾರಾಟದ ಕಮಿಷನ್‌ ಮೊತ್ತ ಹೆಚ್ಚಳ ಸೇರಿದಂತೆ ನ್ಯಾಯಬೆಲೆ ಅಂಗಡಿಕಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾ.1ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳುವುದಾಗಿ ಬಿಜೆಪಿ ಗುಜರಾತ್‌ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಬೇಡಿಕೆಗಳ ಪಟ್ಟಿಯನ್ನು ಸೋಮವಾರ ಗುಜರಾತ್‌ ಸರ್ಕಾರಕ್ಕೆ ಸಲ್ಲಿಸಿ ಬಳಿಕ ಮಾತನಾಡಿದ ಗುಜರಾತ್‌ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷರೂ ಆದ ಮೋದಿ ಸಹೋದರ ಪ್ರಹ್ಲಾದ್‌ ಮೋದಿ, ‘ರಾಜ್ಯದಲ್ಲಿ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ಕ್ವಿಂಟಲ್‌ಗೆ 85 ರು. ನೀಡಲಾಗುತ್ತಿದೆ. ಆದರೆ, ರಾಜಸ್ಥಾನ ಮತ್ತು ದೆಹಲಿ ಸೇರಿ ಇತರ ರಾಜ್ಯಗಳಲ್ಲಿ 200 ರು.ಗೂ ಹೆಚ್ಚು ಕಮಿಷನ್‌ ನೀಡಲಾಗುತ್ತಿದೆ. ಇದೇ ರೀತಿ ಕಮಿಷನ್‌ ನಮಗೂ ನೀಡಬೇಕು’ ಎಚ್ಚರಿಕೆ ನೀಡಿದ್ದಾರೆ.