ಬಂಕುರಾ :  ಬಂಗಾಳದ ಬಂಕುರಾ ಪ್ರದೇಶದ ಕ್ರಿಶ್ಚಿಯನ್ ಕಾಲೇಜಿನಲ್ಲಿ  ದ್ವಿತೀಯ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪಡೆದ ಆಟೋಗ್ರಾಫ್ ನಿಂದ ಇದೀಗ ಭರ್ಜರಿ  ಫೇಮಸ್ ಆಗಿದ್ದಾರೆ.  ಅದೇ ಕಾರಣಕ್ಕೆ ಆಕೆಗೆ ಹೆಚ್ಚಿನ ಮದುವೆ ಪ್ರಪೋಸಲ್ ಗಳೂ ಕೂಡ ಬರಲು ಆರಂಭವಾಗಿದೆ.   

19 ವರ್ಷದ ರೀಟಾ ಮುದಿ ಮನೆ ಬಾಗಿಲಿಗೆ ಮದುವೆ ಪ್ರಪೋಸಲ್ ಗಳು ಬರುತ್ತಿವೆ. ಕಳೆದ 10 ದಿನಗಳ ಹಿಂದೆ ಆಕೆಗೆ ತಾಯಿಯ ಜೊತೆ ಪ್ರಧಾನಿ ಕಾರ್ಯಕ್ರಮಕ್ಕೆ ತೆರಳಿದ್ದಳು. ಈ ವೇಳೆ ಸ್ಥಳದಲ್ಲಿ ಹಾಕಿದ್ದ ಟೆಂಟ್ ಕುಸಿದು ಬಿದ್ದು ಆಕೆ ಗಾಯಗೊಂಡಿದ್ದಳು. 

ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಆಸ್ಪತ್ರೆಗೆ ಬಂದು  ಪ್ರಧಾನಿ ಗಾಯಾಳುಗಳನ್ನು ಭೇಟಿ ಮಾಡಿದ್ದರು. ಇದೇ ವೇಳೆ ಪ್ರಧಾನಿ ನೋಡಿ ಹರ್ಷಗೊಂಡ ಆಕೆ ಅವರಿಂದ ಆಟೋಗ್ರಾಫ್ ಕೂಡ ಪಡೆದುಕೊಂಡಿದ್ದಳು. 

ಮಾಧ್ಯಮಗಳಲ್ಲಿ ರೀಟಾ ಫೊಟೊ ಪ್ರಧಾನಿಯೊಂದಿಗೆ ಪ್ರಕಟವಾಗುತ್ತಲೇ ಆಕೆಯನ್ನು ಭೇಟಿ ಮಾಡಲು ಬರುವವರ ಸಂಖ್ಯೆ ಹೆಚ್ಚಾಯ್ತು. ಇದೇ ವೇಳೆ ಮದುವೆ ಪ್ರಪೋಸಲ್ ಗಳೂ ಕೂಡ ಹೆಚ್ಚಾಗಿ ಬರುತ್ತಿವೆ ಎಂದು ರೀಟಾ ತಾಯಿ ಸಂಧ್ಯಾ ಹೇಳಿದ್ದಾರೆ.