ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಹಿಲರಿ ಕ್ಲಿಂಟನ್, ಎಫ್'ಬಿಐ ಮುಖ್ಯಸ್ಥ ಜೇಮ್ಸ್ ಕಾಮಿ, ಅ್ಯಪಲ್ ಸಿಇಓ ಟಿಮ್ ಕುಕ್ ಮುಂತಾದವರನ್ನು ಕೂಡಾ ಪ್ರಧಾನಿ ಮೋದಿ ಹಿಂದಿಕ್ಕಿದ್ದಾರೆ.
ನವದೆಹಲಿ (ಡಿ.05): ಪ್ರತಿಷ್ಠಿತ ಟೈಮ್ಸ್ ಮ್ಯಾಗಜಿನ್‌ನ ‘ವರ್ಷದ ವ್ಯಕ್ತಿ-2016’ಕ್ಕೆ ಓದುಗರ ಆನ್‌ಲೈನ್ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೆಲವು ಸಾಧಿಸಿದ್ದಾರೆ.
ಓದುಗರ ಮತದಾನದಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನೂ ಕೂಡ ಪ್ರಧಾನಿ ಮೋದಿ ಹಿಂದಿಕ್ಕಿದ್ದಾರೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಹಿಲರಿ ಕ್ಲಿಂಟನ್, ಎಫ್'ಬಿಐ ಮುಖ್ಯಸ್ಥ ಜೇಮ್ಸ್ ಕಾಮಿ, ಅ್ಯಪಲ್ ಸಿಇಓ ಟಿಮ್ ಕುಕ್ ಮುಂತಾದವರನ್ನು ಕೂಡಾ ಪ್ರಧಾನಿ ಮೋದಿ ಹಿಂದಿಕ್ಕಿದ್ದಾರೆ.
ಟೈಮ್ಸ್ ‘ವರ್ಷದ ವ್ಯಕ್ತಿ’ ಗೌರವದ ಆಯ್ಕೆಗೆ ನಡೆಯುವ ಮತದಾನದಲ್ಲಿ ಪ್ರಧಾನಿ ಮೋದಿಯವರು ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧೆಯಲ್ಲಿದ್ದಾರೆ. ಒಳ್ಳೆಯ ಅಥವಾ ಕೆಟ್ಟ ವಿಷಯಕ್ಕಾಗಿ ಕಳೆದ ವರ್ಷದಲ್ಲಿ ನಮ್ಮ ಜಗತ್ತಿನ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಗಳನ್ನು ‘ವರ್ಷದ ವ್ಯಕ್ತಿ’ ಎಂದು ಓದುಗರ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕಳೆದ ವರ್ಷ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ‘ವರ್ಷದ ವ್ಯಕ್ತಿ’ಯಾಗಿ ಆಯ್ಕೆಯಾಗಿದ್ದರು. ಪ್ರತಿ ವರ್ಷ ತಮ್ಮ ಓದುಗರಲ್ಲಿ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡಲು ಆನ್‌ಲೈನ್ ಮತದಾನಕ್ಕೆ ಪತ್ರಿಕೆ ಮನವಿ ಮಾಡುತ್ತದೆ.