Asianet Suvarna News Asianet Suvarna News

ಈ ಫೋಟೋ ಕ್ಲಿಕ್ಕಿಸಿದ್ದು ಮೋದಿ: ಪ್ರಧಾನಿ ಮೋಡಿ ನೀವೇ ನೋಡಿ!

ಫೋಟೋಗ್ರಾಫರ್ ಆದ ಪ್ರಧಾನಿ ಮೋದಿ! ವಿಮಾನದಿಂದ ಸಿಕ್ಕಿಂ ನೈಸರ್ಗಿಕ ಸೌಂದರ್ಯ! ಮನಸೂರೆಗೊಳ್ಳುವ ಫೋಟೋ ಸೆರೆ ಹಿಡಿದ ಮೋದಿ! ಮೋದಿ ಫೋಟೋಗ್ರಾಫಿ ಕಲೆಗೆ ತಲೆದೂಗಿದ ಜನ

PM Modi Turns Photographer On His Way To Sikkim
Author
Bengaluru, First Published Sep 24, 2018, 11:31 AM IST
  • Facebook
  • Twitter
  • Whatsapp

ಸಿಕ್ಕಿಂ(ಸೆ.24): ಪ್ರಧಾನಿ ನರೇಂದ್ರ ಮೋದಿ ಇಂದು ಸಿಕ್ಕಿಂ ಪ್ರವಾಸದಲ್ಲಿದ್ದಾರೆ. ಇಲ್ಲಿನ ಪೆಕ್ ಯಾಂಗ್ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ಈ ಮಧ್ಯೆ ಪ್ರಧಾನಿ ಮೋದಿ ಸಿಕ್ಕಿಂ ನ ನೈಸರ್ಗಿಕ ಸೌಂದರ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಪ್ರಧಾನಿ ಮೋದಿ ಅವರ ಫೋಟೋಗ್ರಾಫಿ ಕಲೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ವಿಮಾನದ ಮೂಲಕ ಸಿಕ್ಕಿಂ ನ ಸೈಸರ್ಗಿಕ ಸೌಂದರ್ಯವನ್ನು ಸೆರೆ ಹಿಡಿದಿರುವ ಮೋದಿ, ಇದಕ್ಕೆ ‘ಪ್ರಶಾಂತ ಮತ್ತು ಪ್ರಶಂಸನೀಯ’ಎಂದು ಹೆಸರಿಸಿದ್ದಾರೆ. ಒಟ್ಟು ನಾಲ್ಕು ಫೋಟೋ ತೆಗೆದಿರುವ ಮೋದಿ, ಸಿಕ್ಕಿಂ ನಿಸರ್ಗವನ್ನು  ಮನಸಾರೆ ಕೊಂಡಾಡಿದ್ದಾರೆ.
 

Follow Us:
Download App:
  • android
  • ios