ಸಾಬರಮತಿಯಿಂದ ಅಂಬಾಜಿ ದೇಗುಲಕ್ಕೆ ಸೀಪ್ಲೇನ್ ಯಾನ 

ಅಹಮದಾಬಾದ್: ಗುಜರಾತ್ ಚುನಾವಣಾ ಪ್ರಚಾರದ ಕೊನೆಯ ದಿನವಾದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಸಾಬರಮತಿ ನದಿಯಲ್ಲಿ ಸೀಪ್ಲೇನ್ ಮೂಲಕ ಸಂಚರಿಸಿ ಮತದಾರರನ್ನು ಸೆಳೆಯಲು ಯತ್ನಿಸಿದರು.

ಮೋದಿ ಅವರ ಸೀಪ್ಲೇನ್ ಸಂಚಾರ ಶ್ರೀಮಂತಿಕೆಯ ಸಂಕೇತ. ಇದು ಬಡವರು-ಸಿರಿವಂತರ ನಡುವಿನ ಅಂತರದ ಪ್ರದರ್ಶನ. ಇದು ಹವಾ-ಹವಾಯಿ.

ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ

ಅವರು ಸಾಬರಮತಿಯಿಂದ ಸೀಪ್ಲೇನ್’ನಲ್ಲಿ ಸಂಚರಿಸಿ ಅಂಬಾಜಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಿಜೆಪಿ ಮಂಗಳವಾರ ಅಹ್ಮದಾಬಾದ್‌ನಲ್ಲಿ ಮೋದಿ ರೋಡ್‌ಶೋ ಏರ್ಪಡಿಸಿತ್ತು. ಆದರೆ ಭದ್ರತಾ ಕಾರಣಗಳಿಗಾಗಿ ರೋಡ್ ಶೋಗೆ ಪೊಲೀಸರು ಅನುಮತಿ ರದ್ದುಗೊಳಿಸಿದ್ದರು.

ಹೀಗಾಗಿ ಕೊನೇ ಕ್ಷಣದಲ್ಲಿ ಮೋದಿ ಅವರು ಸೀ ಪ್ಲೇನ್‌ನಲ್ಲಿ ಸಂಚರಿಸಿ ಹವಾ ಸೃಷ್ಟಿಸಲು ನಿರ್ಧರಿಸಿದ್ದರು.