ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಘೋಷಣೆಗೆ 75ನೇ ವರ್ಷಗಳ ಸಂಭ್ರಮ. ಈ ಸಂಭ್ರಮವನ್ನ ಇಮ್ಮಡಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ.
ನವದೆಹಲಿ(ಅ.21): ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕಿಕೊಟ್ಟನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ‘ಆಜಾದ್ ಹಿಂದ್’ ಘೋಷಣೆಗೆ 75 ವರ್ಷ ತುಂಬಿದ ನೆನಪಿನಾರ್ಥವಾಗಿ (ಇಂದು) ಅ.21ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ್ದಾರೆ.
"
ಈ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಬೋಸ್ ಸ್ಮರಣೆ ಮಾಡಿದ್ದಾರೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಇದ್ದ ಹೊರಾತಾಗಿಯೂ, ಅದಕ್ಕೆ ಪ್ರತಿಯಾಗಿ ಬೋಸ್ ಅವರು, 1943ರ ಅಕ್ಟೋಬರ್ 21ರಂದು ದೇಶದ ಮೊದಲ ಸ್ವತಂತ್ರ ಭಾರತದ ರಚನೆ ಬಗ್ಗೆ ಘೋಷಣೆ ಮಾಡಿದ್ದರು.
ಬ್ರಿಟಿಷರ ದಾಸ್ಯದಿಂದ ಭಾರತ ಹೊರಬಂದು ಸ್ವಾತಂತ್ರ್ಯ ಪಡೆಯಲು ಇದು ನಾಂದಿ ಹಾಡಿತು . ನೇತಾಜಿ ಸುಭಾಷ್ ಚಂದ್ರ ಬೋಸ್ ನಮಗೆ ಪ್ರೇರಣೆ ಎಂದು ಮೋದಿ ಹೇಳಿದರು. ಇದೇ ವೇಳೆ ನೇತಾಜಿ ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂ ಸ್ಥಾಪನೆಗೆ ಶಿಲಾನ್ಯಾಸ ಮಾಡಿದರು.
