ಪ್ರಧಾನಿ ಮೋದಿಯವರ ಕರೆಗೆ ಓಗುಟ್ಟು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ ಇಂಗ್ಲೆಂಡ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಜಾಗತಿಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
ನವದೆಹಲಿ (ಡಿ.02): ಪ್ರಧಾನಿ ಮೋದಿಯವರ ಕರೆಗೆ ಓಗುಟ್ಟು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ ಇಂಗ್ಲೆಂಡ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಜಾಗತಿಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.
2015 ನವೆಂಬರ್ ನಲ್ಲಿ ಇಂಗ್ಲೆಂಡ್ ಪ್ರವಾಸವನ್ನು ನೆನೆಪಿಸಿಕೊಳ್ಳುತ್ತಾ ಭಾರತ-ಇಂಗ್ಲೆಂಡ್ ಸಂಬಂಧಗಳನ್ನು ಬಲಗೊಳಿಸಲು ವೈಯಕ್ತಿಕವಾಗಿ ಬೆಂಬಲ ನೀಡಿದ ಡೇವಿಡ್ ಕ್ಯಾಮರೂನ್ ಗೆ ಮೋದಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಬ್ರೆಕ್ಸಿಟ್ ಬೆಂಬಲಿಗರ ಗೆಲುವಿನಿಂದಾಗಿ ಕ್ಯಾಮರೂನ್ ತಮ್ಮ ಹುದ್ದಗೆ ರಾಜಿನಾಮೆ ನೀಡಿದ್ದರು. ಅದಾದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ.
