ಸಂಸತ್ತಿನಲ್ಲಿ ರಾಷ್ಟ್ರಪತಿಯವರ ವಂದನಾ ನಿರ್ಣಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ, ನೋಟು ಅಮಾನ್ಯ ಕ್ರಮವನ್ನು ಸಮರ್ಥಿಸಿಕೊಂಡರು.

ನವದೆಹಲಿ (ಫೆ.08): ಸಂಸತ್ತಿನಲ್ಲಿ ರಾಷ್ಟ್ರಪತಿಯವರ ವಂದನಾ ನಿರ್ಣಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ, ನೋಟು ಅಮಾನ್ಯ ಕ್ರಮವನ್ನು ಸಮರ್ಥಿಸಿಕೊಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭ್ರಷ್ಟಾಚಾರದ ವಿರುದ್ಧ ಸರ್ಕಾರ ಹೋರಾಡುತ್ತಿರುವುದು ರಾಜಕೀಯವಲ್ಲ. ಆದರೆ ತೃಣಮೂಲ ಕಾಂಗ್ರೆಸ್ ನೋಟು ಅಮಾನ್ಯದ ವಿರುದ್ಧ ಸಂಸತ್ತಿನ ಹೊರಗೆ ಪ್ರತಿಭಟನೆ ಮುಂದುವರೆಸಿತು. ನೋಟು ನಿಷೇಧವಾಗಿ 3 ತಿಂಗಳು ಕಳೆದರೂ ಟಿಎಂಸಿ ಸಂಸದರು ವಿತ್ ಡ್ರಾ ಮಿತಿಯ ನಿರ್ಬಂಧದ ಬಗ್ಗೆ ಪ್ರತಿಭಟಿಸಿದ್ದಾರೆ. ಆದರೆ ಜನರ ಅಂತರಂಗವನ್ನು ಅರ್ಥಮಾಡಿಕೊಳ್ಳಲು ಇದು ಸೂಕ್ತ ಸಮಯವಾಗಿತ್ತು ಎಂದು ಮೋದಿ ಹೇಳಿದ್ದಾರೆ.

ಜನರು ಮತ್ತು ಸರ್ಕಾರ ನೋಟು ನಿಷೇಧದ ಪರವಾಗಿದ್ದಾರೆ ಆದರೆ ವಿರೋಧ ಪಕ್ಷಗಳು ಮಾತ್ರ ಇದನ್ನು ಖಂಡಿಸುತ್ತಿದೆ ಎಂದಿದ್ದಾರೆ.