Asianet Suvarna News Asianet Suvarna News

ದೇಶದಲ್ಲಿ ಜಾತಿವಾದ ಬೇಡವೇ ಬೇಡ, ಸಮಾನತೆ ನಮ್ಮ ಮಂತ್ರವಾಗಲಿ: ಪ್ರಧಾನಿ ಮೋದಿ

ಇಡೀ ದೇಶಾದ್ಯಂತ 71 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಾಚರಣೆಯಿಂದ ಆಚರಿಸಲಾಗುತ್ತಿದ್ದು, ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು. ಸತತ ನಾಲ್ಕನೇ ಬಾರಿಗೆ ಕೆಂಪುಕೊಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

PM Modi Speaks On The Occasion Of 70th Independence day

ನವದೆಹಲಿ(ಆ.15): ಇಡೀ ದೇಶಾದ್ಯಂತ 71 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಾಚರಣೆಯಿಂದ ಆಚರಿಸಲಾಗುತ್ತಿದ್ದು, ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು. ಸತತ ನಾಲ್ಕನೇ ಬಾರಿಗೆ ಕೆಂಪುಕೊಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

- ಮೊದಲಿಗೆ ಉತ್ತರ ಪ್ರದೇಶದ ಗೋರಖ್​​​ಪುರ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ ಮೋದಿ, ನಮ್ಮ ಮಕ್ಕಳ ಸಾವು ನನಗೆ ನೋವು ತಂದಿದೆ. ಅಲ್ಲದೆ ಉತ್ತರ ಭಾರತದಲ್ಲಿ ಪ್ರವಾಹದಿಂದ ಜನರು ಸಂಕಷ್ಟದಲ್ಲಿದ್ದಾರೆ. ಪ್ರವಾಹದಿಂದ ನೊಂದವರಿಗಾಗಿ ನಮ್ಮ ಮನ ಮಿಡಿಯುತ್ತಿದೆ. ಪ್ರವಾಹ ಪೀಡಿತ ಜನರ ಸಂಕಷ್ಟಕ್ಕೆ ದೇಶದ ಜನರೆಲ್ಲರೂ ಕೈಜೋಡಿಸಿ ಎಂದು ಕೇಳಿಕೊಂಡರು. ಗೋರಖ್​​ಪುರಲ್ಲಿ ಮಕ್ಕಳು ಮೃತಪಟ್ಟಿದಕ್ಕೆ ನನಗೆ ನೋವಾಗುತ್ತಿದೆ

- ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಿದ ಮೋದಿ, ಬಡವರನ್ನು ಲೂಟಿ ಮಾಡಿ ಆಸ್ತಿ ಮಾಡಿದವರಿಗರೆ ನಿದ್ದೆ ಬರುತ್ತಿಲ್ಲ. 800 ಕೋಟಿ ರೂಪಾಯಿ ಬೇನಾಮಿ ಆಸ್ತಿಯನ್ನು ಪತ್ತೆ ಮಾಡಿದ್ದೇವೆ. ಕಪ್ಪುಹಣದ ವಿರುದ್ಧ ನಾವು ನುಡಿದಂತೆ ನಡೆಯುತ್ತಿದ್ದೇವೆ. ಚಲ್ತಾ ಹೈ ಅನ್ನೋ ಮನಸ್ಥಿತಿ ಸಂಪೂರ್ಣ ತೊಲಗಬೇಕು. ಜಿಎಸ್​​ಟಿ ಜಾರಿಯಿಂದ ದೇಶಕ್ಕೆ ಹೊಸ ಶಕ್ತಿ ಬಂದಿದೆ. ರಾಜ್ಯ ಸರ್ಕಾರಗಳು ಚಿಕ್ಕಣ್ಣ, ಕೇಂದ್ರ ಸರ್ಕಾರ ದೊಡ್ಡಣ್ಣ ಇದ್ದಂತೆ, ಆಡಳಿತದಲ್ಲಿ ಬದಲಾವಣೆ ತರಲು ತಂತ್ರಜ್ಞಾನ ಅಳವಡಿಸಿದ್ದೇವೆ. ಆದರೆ ದೇಶದ ಅಭಿವೃದ್ಧಿಗೆ ರಾಜ್ಯಗಳ ಸಹಕಾರ ಬೇಕೆ ಬೇಕು ಎಂದಿದ್ದಾರೆ.

- ದೇಶದಲ್ಲಿ ಜಾತಿವಾದ ಬೇಡವೇ ಬೇಡ, ಸಮಾನತೆ ನಮ್ಮ ಮಂತ್ರವಾಗಲಿ. ಪ್ರತಿಯೊಬ್ಬರನ್ನೂ ಸಮಾನತೆಯಿಂದ ಕಾಣುವುದು ಈ ದೇಶದ ಸಂಸ್ಕೃತಿ, ಕನಸಿನ ಭಾರತ ನಿರ್ಮಾಣ ಮಾಡುವುದು ನನ್ನ ಗುರಿಯಾಗಿದೆ. ರೈಲು ತನ್ನ ಹಳಿ ಬದಲಿಸಿದಾಗ ವೇಗ ಕಡಿಮೆಯಾಗುತ್ತೆ. ನಾನು ಕೂಡಾ ಸ್ವಲ್ಪ ತಡವಾದ್ರೂ ಅಭಿವೃದ್ಧಿ ಮಾಡಿಯೇ ತೀರುತ್ತೇನೆ ಎಂದಿದ್ದಾರೆ.

-ಕೆಂಪುಕೋಟೆ ಭಾಷಣದಲ್ಲಿ ನೋಟ್​ ಬ್ಯಾನ್ ವಿಚಾರವನ್ನೂ ಪ್ರಸ್ತಾಪಿಸಿದ ಮೋದಿ, ನೋಟ್​​ ಬ್ಯಾನ್​​ನಿಂದ ಕಪ್ಪು ಹಣ ಹೊರ ತೆಗೆಯಲು ಸಹಕಾರಿಯಾಗಿದೆ. ನೋಟು ನಿಷೇಧ ಬಳಿ ಅಡಗಿಟ್ಟಿದ್ದ 3 ಲಕ್ಷ ಕೋಟಿ ಹಣ ಬ್ಯಾಂಕ್​​ಗಳಿಗೆ ಬಂದಿದೆ. ನೋಟ್​ ಬ್ಯಾನ್'​ನಿಂದ 18 ಲಕ್ಷ ಜನರ ವ್ಯಾಪಾರ ವಹಿವಾಟು ಗೊತ್ತಾಗಿದೆ. ನೋಟ್​ ಬ್ಯಾನ್​ ಆದ ನಾನಾ ಜನ ನಾನಾ ರೀತಿ ಮಾತಾಡಿದ್ರು. ಆದರೆ ಇದರಿಂದ 3 ಲಕ್ಷ ನಕಲಿ ಕಂಪನಿಗಳು ಬಂದ್​ ಆಗಿವೆ. ಒಂದೇ ವಿಳಾಸ ಇಟ್ಟುಕೊಂಡು 400 ಕಂಪನಿಗಳನ್ನ ನಡೆಸುತ್ತಿದ್ರು. ಜಿಎಸ್'​ಟಿಯಿಂದಲೂ ಜಾರಿಯಿಂದ ನಕಲಿ ಕಂಪನಿಗಳನ್ನು ಪತ್ತೆ ಹಚ್ಚಿದ್ದೇವೆ. ನೋಟ್​​ ಬ್ಯಾನ್​ ಬಳಿಕ ಬ್ಯಾಂಕ್​​​​​'ನಲ್ಲಿ ಹಣ ತುಂಬಿ ತುಳುಕುತ್ತಿದೆ. ಬ್ಯಾಂಕ್​​ಗಳಲ್ಲಿ ಗೃಹ ಸಾಲ, ಇತರೆ ವೈಯಕ್ತಿಕ ಬಡ್ಡಿ ದರವೂ ಕಡಿಮೆಯಾಗಿದೆ ಎಂದಿದ್ದಾರೆ.

ಇದರೊಂದಿಗೆ, ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಯಾವ ರೀತಿ ವಿಶ್ವವೇ ನಮ್ಮ ಜೊತೆ ಕೈಜೋಡಿಸಿದೆ ಎಂಬುವುದನ್ನೂ ವಿವರಿಸುವುದರೊಂದಿಗೆ ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನೂ ತಿಳಿಸಿದರು. ವಿಜ್ಞಾನ, ತಂತ್ರಜ್ಞಾನದಲ್ಲಿ ಭಾರತ ಸ್ಥಾಪಿಸಿರುವ ಹೊಸ ಮೈಲಿಗಲ್ಲಿನ ಕುರಿತಾಗಿ ವಿವರಿಸಿದ ಮೋದಿ ಭಯೋತ್ಪಾದನೆ, ಪ್ರವಾಹ, ವರ್ಣಬೇದ ನೀತಿ, ಸ್ವಚ್ಥಭಾರತ ಅಭಿಯಾನವನ್ನೂ ಉಲ್ಲೇಖಿಸಿದರು ಹಾಗೂ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಕುರಿತಾಗಿಯೂ ತಿಳಿಸಿದರು

ಭಾಷಣದ ಕೊನೆಗೆ ಮನಸ್ಸಿದ್ದರೆ ಮಾರ್ಗ ಅಂತ ಶ್ರೀಕೃಷ್ಣ ಆಗ ಉಪದೇಶ ನೀಡಿದ್ದ. ಹೀಗಾಗಿ ಒಗ್ಗಟ್ಟಿನಿಂದ ನಾವೆಲ್ಲರೂ ದೇಶದ ಬದಲಾವಣೆ ತರಲು ಸಾಧ್ಯ ಎಂದಿದ್ದಾರೆ.

 

Latest Videos
Follow Us:
Download App:
  • android
  • ios