ಕಪ್ಪುಹಣದ ಕಡಿವಾಣಕ್ಕೆ ನಮ್ಮ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದ ಮೋದಿ ದೇಶದಲ್ಲಿ ನೋಟ್​​ ಬ್ಯಾನ್​ ಯಶಸ್ವಿಯಾಗಿದೆ. ಜಿಎಸ್​ಟಿ, ನೋಟ್​ ಬ್ಯಾನ್​ ಕ್ರಮ ಸರಿಯಾಗಿದೆ. ದೇಶದ ಜನರು ಕೂಡ ನಮ್ಮ ಕಾರ್ಯಕ್ಕೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ ಎಂದು ನೋಟ್​​ ಬ್ಯಾನ್​ ಕ್ರಮವನ್ನು ಸಮರ್ಥಿಸಿಕೊಂಡರು.

ನವದೆಹಲಿ(ಅ.04): ಜಿಡಿಪಿ ಕುಸಿತಕ್ಕೆ ನಮ್ಮ ಸರ್ಕಾರವನ್ನು ದೂಷಿಸುವ ಅಗತ್ಯವಿಲ್ಲ ಹಿಂದಿನ ಯುಪಿಎ ಆಡಳಿತದ ಅವಧಿಯಲ್ಲೂ 8 ಬಾರಿ ಕನಿಷ್ಠ ಮಟ್ಟಕ್ಕೆ ಹೋಗಿತ್ತು' ಎಂದು ಆರ್ಥಿಕತೆ ಕುಸಿತತೆಯ ಬಗ್ಗೆ ಟೀಕೆ ಮಾಡುತ್ತಿರುವವರ ವಿರುದ್ಧ ಚಾಟಿ ಬೀಸಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಪೊರೇಟ್​ ಕಂಪನಿಗಳ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕತೆ ವಿಚಾರದಲ್ಲಿ ನಾವು ಹಿಂದೆ ಬಿದ್ದಿಲ್ಲ. ಆರ್ಥಿಕತೆ ಕುಸಿತಗೊಂಡಿರುವುದು ಇದೇ ಮೊದಲಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ 8 ಬಾರಿ ಆರ್ಥಿಕತೆ ಕುಸಿತ ಕಂಡಿತ್ತು. ಒಂದು ತ್ರೈಮಾಸಿಕ ಆರ್ಥಿಕ ಕುಸಿತಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಕೇವಲ ನಕಾರಾತ್ಮಕ ಅಂಶಗಳನ್ನು ಬಿಂಬಿಸಬೇಡಿ' ಎಂದು ತಿಳಿಸಿದರು.

ನೋಟ್ ಬ್ಯಾನ್ ಕ್ರಮ ಸಮರ್ಥನೆ

ಕಪ್ಪುಹಣದ ಕಡಿವಾಣಕ್ಕೆ ನಮ್ಮ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದ ಮೋದಿ ದೇಶದಲ್ಲಿ ನೋಟ್​​ ಬ್ಯಾನ್​ ಯಶಸ್ವಿಯಾಗಿದೆ. ಜಿಎಸ್​ಟಿ, ನೋಟ್​ ಬ್ಯಾನ್​ ಕ್ರಮ ಸರಿಯಾಗಿದೆ. ದೇಶದ ಜನರು ಕೂಡ ನಮ್ಮ ಕಾರ್ಯಕ್ಕೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ ಎಂದು ನೋಟ್​​ ಬ್ಯಾನ್​ ಕ್ರಮವನ್ನು ಸಮರ್ಥಿಸಿಕೊಂಡರು.

ನಮ್ಮ ಸರ್ಕಾರ ಪ್ರಾಮಾಣಿಕರಿಗೆ ರಕ್ಷಣೆ ನೀಡುತ್ತೆ, ಭ್ರಷ್ಟರಿಗಲ್ಲ. ಸಮಸ್ಯೆಗೆ ಸಿಲುಕಿರುವ ಕಂಪನಿಗಳ ನೆರವಿಗೆ ಸರ್ಕಾರ ಸದಾ ಸಿದ್ಧ. ದೇಶಕ್ಕೆ ದಾಖಲೆಯ ವಿದೇಶ ನೇರ ಬಂಡವಾಳ ಹರಿದುಬಂದಿದೆ. ದೇಶದ ಅಭಿವೃದ್ಧಿಗೆ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. 3 ವರ್ಷದ ಅವಧಿಯಲ್ಲಿ 1500 ರಸ್ತೆಗಳನ್ನು ನಿರ್ಮಿಸಲಾಗಿದೆ. 2600 ಕಿ.ಮೀ. ರೈಲ್ವೆ ಮಾರ್ಗಗಳನ್ನು ವಿಸ್ತರಿಸಲಾಗಿದೆ. ಕೇವಲ ತುರ್ತು ಸಮಸ್ಯೆಗಳಿಗಷ್ಟೇ ಗಮನಹರಿಸಿಲ್ಲ. ಎಲ್ಲಾ ಕ್ಷೇತ್ರಗಳ ಸಮಸ್ಯೆಗಳ ನಿವಾರಣೆಗೂ ಆದ್ಯತೆ ನೀಡಿದ್ದೇವೆ' ಎಂದು ಹೇಳಿದರು.

26 ಕೋಟಿ ಎಲ್ಇಡಿ ಬಲ್ಬ್'ಗಳ ವಿತರಣೆ

ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಬಡತನ ನಿರ್ಮೂಲನೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. 26 ಕೋಟಿ ಎಲ್​ಇಡಿ ಬಲ್ಬ್​ಗಳನ್ನು ವಿತರಿಸಲಾಗಿದೆ. ದೇಶದ ಭವಿಷ್ಯಕ್ಕಾಗಿ ಸಾಕಷ್ಟು ಶ್ರಮವಹಿಸಬೇಕಿದೆ. ಹೀಗಾಗಿ ಎಷ್ಟೇ ಕಷ್ಟಗಳು ಎದುರಾದರೂ ಮುನ್ನಡೆಯಬೇಕಿದೆ. ಯುವಕರ ನೆರವಿಗೆ ಕೇಂದ್ರ ಸರ್ಕಾರ ಸದಾ ಬದ್ಧ. ಯುವಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸ್ಟಾರ್ಟ್​ ಅಪ್​​, ಸ್ಕಿಲ್​ ಇಂಡಿಯಾದಂತ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ' ಎಂದು ತಿಳಿಸಿದರು.