ವೃಂದಾವನ : ಪ್ರಧಾನಿ ನರೇಂದ್ರ ಮೋದಿ ಅವರು ವೃಂದಾವನಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿನ ಬಡಮಕ್ಕಳಿಗೆ ಸ್ವತಃ ಊಟ ಬಡಿಸಿದ್ದಾರೆ. 

ಅಕ್ಷಯ ಪಾತ್ರ ಪ್ರತಿಷ್ಠಾನದ ಬಿಸಿಯೂಟದ ಫಲಾನುಭವಿ ಮಕ್ಕಳ ಸಂಖ್ಯೆ  300 ಕೋಟಿ ತಲುಪಿದ ಸವಿನೆನಪಿಗಾಗಿ ವೃಂದಾವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಧಾನಿ ಉಣಬಡಿಸುತ್ತಾ, ಸಂಭಾಷಣೆಯನ್ನೂ ನಡೆಸಿದರು. 

ಈ ಸಂದರ್ಭದಲ್ಲಿ ಪುಟ್ಟ ಬಾಲಕಿಯೋರ್ವಳು ಪ್ರಧಾನಿಗೆ ಕೊಟ್ಟ ಉತ್ತರ ಎಲ್ಲರ ಗಮನ ಸೆಳೆಯಿತು. ನಿಮ್ಮ ಊಟ ನನ್ನಿಂದ ತಡವಾಯಿತು ಎಂದು ಪ್ರಧಾನಿ ಹೇಳಿದ್ದಕ್ಕೆ ನಾವು ಬೆಳಗ್ಗೆ  ಆಹಾರ ಸೇವಿಸಿ ಬಂದಿದ್ದೇವೆ ಎಂದು ಹೇಳಿದ್ದು,  ಎಲ್ಲೆಡೆ ವೈರಲ್ ಆಗಿದೆ. 

ಇನ್ನು ಇಸ್ಕಾನ್ ಅಕ್ಷಯಪಾತ್ರ ಕೋಟ್ಯಂತರ ಸಂಖ್ಯೆಯ ಬಡಮಕ್ಕಳಿಗೆ ಬಿಸಿಯೂಟ ವಿತರಿಸುತ್ತಿದೆ.  ಬೆಂಗಳೂರು ಮೂಲದ ಈ ಸಂಸ್ಥೆ  ಸಾಮಾಜಿಕ ಸೇವೆಯ ರೂಪದಲ್ಲಿ ಮಕ್ಕಳಿಗೆ ಊಟ ವಿತರಣೆ ಮಾಡುತ್ತಿದ್ದು, ದಿನದಿನಕ್ಕೂ ಇದರ ಫಲಾನುಭವಿಗಳ ಸಂಖ್ಯೆ ದಿನದಿನಕ್ಕೂ ಏರುತ್ತಿದೆ.  300 ಕೋಟಿಗೆ ಫಲಾನುಭವಿ ಮಕ್ಕಳ ಸಂಖ್ಯೆ ತಲುಪಿದ್ದು, ಇದರ ಸಂಭ್ರಮಾಚರಣೆಯಲ್ಲಿ ವೃಂದಾವನದಲ್ಲಿ ಫೆ. 11ರಂದು ನಡೆಸಲಾಯಿತು.