ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿದ ಪ್ರಧಾನಿ ಮೋದಿ| ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಲು ಕರೆ| ಕಾಶ್ಮೀರಿಗಳ ಮೇಲಿನ ದಾಳಿ ನಿಲ್ಲಿಸಲು ಮನವಿ| ಭಯೋತ್ಪಾದಕರನ್ನು ಮನುಷ್ಯತ್ವದ ಶತ್ರುಗಳು ಎಂದು ಜರೆದ ಮೋದಿ|
ಟೊಂಕ್(ಫೆ.23): ಪುಲ್ವಾಮಾ ದಾಳಿ ಬಳಿಕ ದೇಶದ ವಿವಿಧೆಡೆ ಕಾಶ್ಮೀರಿಗರ ವಿರುದ್ಧ ನಡೆಯುತ್ತಿರುವ ಹಲ್ಲೆಗಳನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
ಭಯೋತ್ಪಾದನೆ ನಿರ್ಮೂಲನೆ ನಿಟ್ಟಿನಲ್ಲಿ ನಾವೆಲ್ಲಾ ತೀವ್ರ ಹೋರಾಟ ನಡೆಸಬೇಕಾಗಿದ್ದು, ನಾವು ಹೋರಾಡಬೇಕಿರುವುದು ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರಿಗರ ವಿರುದ್ಧ ಅಲ್ಲ ಎಂದು ಮೋದಿ ಹೇಳಿದ್ದಾರೆ.
ರಾಜಸ್ಥಾನದ ಟೊಂಕ್ ನಲ್ಲಿ ಮಾತನಾಡಿದ ಪ್ರಧಾನಿ, ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದರು.
ದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಗಳು ಖಂಡನೀಯ ಎಂದ ಮೋದಿ, ಮನುಷ್ಯತ್ವ ಶತ್ರುಗಳಾದ ಭಯೋತ್ಪಾದಕರ ವಿರುದ್ಧ ನಾವೆಲ್ಲಾ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.
