ಕೊಲಂಬೋ(ಜೂ.09): ಅನಿವಾಸಿ ಭಾರತೀಯರ ಪರಿಶ್ರಮದಿಂದಾಗಿ ವಿಶ್ವಮಟ್ಟದಲ್ಲಿ ಭಾರತದ ಸ್ಥಾನ ಸುಭದ್ರವಾಗಿದೆ ಎಂದು ಪ್ರಧಾನಿ ನೆರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಕೋಲಂಬೋದ ಇಂಡಿಯಾ ಹೌಸ್ ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದರು. 

ಸಾಗರೋತ್ತರ ಭಾರತೀಯ ಸಮುದಾಯ ಹಾಗೂ ಭಾರತ ಸರ್ಕಾರದ ದೃಷ್ಟಿಕೋನ ಒಂದೇ ರೀತಿಯಲ್ಲಿರುವುದು ತಮಗೆ ಅತೀವ ಸಂತೋಷ ತಂದಿದೆ ಎಂದು ಈ ವೇಳೆ ಮೋದಿ ಹೇಳಿದರು.

 ವಿಶ್ವಮಟ್ಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಾಗಿರುವುದಕ್ಕೆ ಅನಿವಾಸಿ ಭಾರತೀಯರ ಕೊಡುಗೆ ಅಪಾರ. ತಾವು ವಿಶ್ವದ ಯಾವುದೇ ರಾಷ್ಟ್ರಕ್ಕೆ ಭೇಟಿ ನೀಡಿದರೂ ಅಲ್ಲಿ ಭಾರತೀಯರದ್ದೇ ಗುಣಗಾನ ಕೇಳುತ್ತೇನೆ ಎಂದು ಮೋದಿ ಹೆಮ್ಮೆ ವ್ಯಕ್ತಪಡಿಸಿದರು.