ರಾಜಸ್ಥಾನದ ಬಾರನ್ ಎಂಬಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ಮೋದಿಜಿಯವರೇ, ನೋಟು ಅಮಾನ್ಯ ಯಜ್ಞಕ್ಕೆ ನೀವು ರೈತರ ಜೀವಗಳನ್ನು ಬಲಿಕೊಟ್ಟಿದ್ದೀರಿ. ಅವರ ಬಳಿಯಿದ್ದ ನಗದನ್ನು ಬೂದಿಯನ್ನಾಗಿ ಮಾಡಿದ್ದೀರಿ, ಎಂದು ವಾಗ್ದಾಳಿ ನಡೆಸಿದ್ದಾರೆ.

ಬಾರನ್, ರಾಜಸ್ಥಾನ (ಡಿ.26): ಯಜ್ಞ ಮಾಡಲು ಪ್ರಧಾನಿ ಮೋದಿಯವರು ರೈತರನ್ನು ಬಲಿನೀಡಿದ್ದಾರೆ ಎಂದು ಹೇಳುವ ಮೂಲಕ, ನೋಟು ಅಮಾನ್ಯ ಕ್ರಮವನ್ನು ಯಜ್ಞವೆಂದು ಬಣ್ಣಿಸಿರುವ ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ರಾಜಸ್ಥಾನದ ಬಾರನ್ ಎಂಬಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ಮೋದಿಜಿಯವರೇ, ನೋಟು ಅಮಾನ್ಯ ಯಜ್ಞಕ್ಕೆ ನೀವು ರೈತರ ಜೀವಗಳನ್ನು ಬಲಿಕೊಟ್ಟಿದ್ದೀರಿ. ಅವರ ಬಳಿಯಿದ್ದ ನಗದನ್ನು ಬೂದಿಯನ್ನಾಗಿ ಮಾಡಿದ್ದೀರಿ, ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಜಾರ್ಖಂಡ್, ಹಾಗೂ ಛತ್ತೀಸಗಢಗಳಲ್ಲಿ ಆದಿವಾಸಿ ಹಾಗೂ ರೈತರಿಂದ ಅವರ ಜಮೀನುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ರೈತರ-ಪರವಾಗಿದ್ದ ಜಮೀನು ಸ್ವಾಧೀನ ಕಾಯ್ದೆಯನ್ನು ಯುಪಿಏ ಸರ್ಕಾರ ಪರಿಚಯಿಸಿದಾಗ, ಸುಗ್ರಿವಾಜ್ಞೆ ಮೂಲಕ ಅದನ್ನು ತಡೆಯಲು ಮೋದಿಯವರು ಮೂರು ಬಾರಿ ಪ್ರಯತ್ನಪಟ್ಟಿದ್ದರು, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನೋಟು ಅಮಾನ್ಯ ಕ್ರಮ ಕೈಗೊಳ್ಳುವ ಮೂಲಕ ಪ್ರಧಾನಿ ಮೋದಿಯವರು ದೇಶದ ಅತೀ-ಶ್ರೀಮಂತ ಜನರಿಗಾಗಿ ಻ನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದ ರಾಹುಲ್ ಗಾಂಧಿ, ‘ಪೇಟಿಎಮ್ ಎಂದರೆ ಪೇ ಟು ಮೋದಿ. ಕಾಳಧನವನ್ನು ವಾಪಾಸು ತಂದು ಬಡವರಿಗೆ ವಿತರಿಸುವುದಾಗಿ ಹೇಳಿದ್ದ ಮೋದಿಯವರು, ಈಗ ತಮ್ಮ ನಿಲುವನ್ನು ಬದಲಾಯಿಸಿದ್ದಾರೆಂದು, ಎಂದು ವ್ಯಂಗ್ಯವಾಡಿದ್ದಾರೆ.