ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿ ರಾಜೀನಾಮೆ| ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ನೃಪೇಂದ್ರ ಮಿಶ್ರಾ |ರಾಜೀನಾಮೆಗೆ ವೈಯಕ್ತಿಕ ಕಾರಣ ನೀಡಿದ ಮಿಶ್ರಾ

ನವದೆಹಲಿ, (ಆ.30): ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Scroll to load tweet…

ನೃಪೇಂದ್ರ ಮಿಶ್ರಾ ಅವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದು, ಮಿಶ್ರಾ ಸ್ಥಾನವನ್ನು ಐಎಎಸ್ ಅಧಿಕಾರಿ ಪಿ.ಕೆ ಸಿನ್ಹಾ ತುಂಬಲಿದ್ದಾರೆ.

ಇನ್ನು ಮಿಶ್ರಾ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, 'ನೃಪೇಂದ್ರ ಮಿಶ್ರಾ ಅತ್ಯುತ್ತಮ ಅಧಿಕಾರಿಯಾಗಿದ್ದರು, 2014ರಲ್ಲಿ ನಾನು ದೆಹಲಿಗೆ ಬಂದಾಗ ಇಲ್ಲಿನ ರೀತಿ ರಿವಾಜುಗಳನ್ನು ಹೇಳಿಕೊಟ್ಟಿದ್ದರು. ಅವರ ಮಾರ್ಗದರ್ಶನ ನನಗೆ ಮೌಲ್ಯಯುತವಾಗಿದೆ ಎಂದಿದ್ದಾರೆ.