ನವದೆಹಲಿ[ಜು.29]: ಪ್ರಕೃತಿಯ ಹೊಸ ಹಾಗೂ ವಿಭಿನ್ನ ಸ್ವರೂಪಗಳನ್ನು ಪರಿಚಯಿಸಿಕೊಡುವ ಡಿಸ್ಕವರಿ ಚಾನೆಲ್ ನ Man Vs Wild ಪ್ರಸಿದ್ಧ ಕಾರ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದೆಂದೂ ಕಾಣದ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು ವನ್ಯಜೀವಿಗಳ ಸಂರಕ್ಷಣೆ ಹಾಗೂ ನೀರು ಮತ್ತು ಶುದ್ಧ ಗಾಳಿಯ ಮಹತ್ವ ಸಾರುವ ಸಲುವಾಗಿ ಮೋದಿ ಭಾರತದ ದಟ್ಟ ಕಾಡುಗಳಲ್ಲಿ ಸುತ್ತಾಡಲಿದ್ದಾರೆ. 

ಈ ಕಾರ್ಯಕ್ರಮದ ಪ್ರೋಮೋ ಈಗಾಗಲೇ Man Vs Wild ಕಾರ್ಕ್ರಮದ ನಿರೂಪಕ ಬೆಯರ್ ಗ್ರಿಲ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾರತದ ಅತ್ಯಂತ ಹಳೆಯ ನ್ಯಾಷನಲ್ ಪಾರ್ಕ್ 'ಕಾರ್ಬೆಟ್ ನ್ಯಾಷನಲ್ ಪಾರ್ಕ್'(Jim Corbett National Park)ನಲ್ಲಿ ಬೆಯರ್ ಗ್ರಿಲ್ಸ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. 

Man Vs Wild with Bear Grylls & PM Modi[ಮ್ಯಾನ್ ವರ್ಸಸ್ ವೈಲ್ಸ್ ವಿತ್ ಬೆಯರ್ ಗ್ರಿಲ್ಸ್ ಆ್ಯಂಡ್ ಪಿಎಂ ಮೋದಿ- ಈ ಎಪಿಸೋಡ್ ಆಗಸ್ಟ್ 12 ರಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ಈ ಸಂಚಿಕೆಯಲ್ಲಿ ವನ್ಯಜೀವಿ ಸಂರಕ್ಷಣೆ ಹಾಗೂ ಪರಿಸರ ಬದಲಾವಣೆಯಂತಹ ಮಹತ್ವಪೂರ್ಣ ವಿಚಾರಗಳನ್ನು ತಿಳಿಸಿಕೊಡಲಾಗುತ್ತದೆ. ಸದ್ಯ ವೈರಲ್ ಆಗಿರುವ ಪ್ರೋಮೋದಲ್ಲಿ ನಿರೂಪಕ ಬೆಯರ್ ಗ್ರಿಲ್ಸ್ ಹಾಗೂ ಪ್ರಧಾನಿ ಮೋದಿ ತೆಪ್ಪವೊಂದರಲ್ಲಿ ಕುಳಿತು ಕಾಡಿನಲ್ಲಿರುವ ನದಿಯನ್ನು ದಾಟುತ್ತಿರುವ ದೃಶ್ಯ ಭಾರೀ ಕುತೂಹಲ ಮೂಡಿಸಿದೆ.

ಪ್ರೋಂಓ ಶೇರ್ ಮಾಡಿಕೊಂಡಿರುವ ಗ್ರಿಲ್ಸ್ 'ಪಿಎಂ ನರೇಂದ್ರ ಮೋದಿಯನ್ನು ಭಾರತದ ಕಾಡುಗಳಲ್ಲಿ ರೋಮಾಂಚನಭರಿತ ಸವಾರಿಗೆ ಕರೆದುಕೊಂಡು ಹೋಗಲು ಸಿಕ್ಕಿದ್ದು ನನಗೆ ಸಿಕ್ಕ ಉತ್ತಮ ಅವಕಾಶಗಳಲ್ಲೊಂದು. ವಿಶ್ವದ ಓರ್ವ ಅತ್ಯುತ್ತಮ ನಾಯಕನೊಂದಿಗೆ ಸಮಯ ಕಳೆಯುವ ಅವಕಾಶ ಸಿಕ್ಕಿದೆ ಎಂದು ಹೆಮ್ಮೆ ಎನಿಸುತ್ತದೆ. ನಮಗೆ ಇತರರ ಅವಶ್ಯಕತೆ ಇದೆ ಎಂಬುವುದಕ್ಕೆ ಕಾಡು ಒಂದು ಅತ್ಯುತ್ತಮ ಉದಾಹರಣೆ. ಇದೇ ಸಂದರ್ಭದಲ್ಲಿ ಮಹಾನ್ ರಾಷ್ಟ್ರದ ನಾಯಕನನ್ನು ಹತ್ತಿರದಿಂದ ಅರಿಯುವ ಅವಕಾಶ ಸಿಕ್ಕಿದೆ' ಎಂದಿದ್ದಾರೆ.

ಅತ್ತ ಪ್ರಧಾನಿ ನರೇಂದ್ರ ಮೋದಿ ಕೂಡಾ 'ಹಲವಾರು ವರ್ಷಗಳವರೆಗೆ ನಾನು ಪ್ರಕೃತಿ, ಬೆಟ್ಟ-ಗುಡ್ಡ ಹಾಗೂ ಕಾಡಿನ ನಡುವೆ ಇದ್ದೆ. ಈಗ ಮತ್ತೊಮ್ಮೆ ಕಾಡಿನಲ್ಲಿ ಸಮಯ ಕಳೆಯುತ್ತಿರುವುದು ಖುಷಿ ಕೊಟ್ಟಿದೆ. ಈ ಬಾರಿ ತ್ಯಂತ ಉತ್ಸಾಹಿ ಬೆಯರ್ ಜೊತೆಗಿದ್ದೇನೆ' ಎಂದಿದ್ದಾರೆ.

"

Man Vs Wild with Bear Grylls & PM Modi[ಮ್ಯಾನ್ ವರ್ಸಸ್ ವೈಲ್ಸ್ ವಿತ್ ಬೆಯರ್ ಗ್ರಿಲ್ಸ್ ಆ್ಯಂಡ್ ಪಿಎಂ ಮೋದಿ- ಈ ಕಾರ್ಯಕ್ರಮ ಪಂಚ ಭಾಷೆಗಳಲ್ಲಿ[ಇಂಗ್ಲೀಷ್, ಬೆಂಗಾಲಿ, ಹಿಂದಿ, ತಮಿಳು ಹಾಗೂ ತೆಲುಗು], 180 ದೇಶಗಳಲ್ಲಿ ಪ್ರಸಾರವಾಗಲಿದೆ. ಪಿಎಂ ಮೊದಿಗೂ ಮೊದಲು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಕೇಟ್ ವಿಂಸ್ಲೆಟ್, ರೋಜರ್ ಫೆಡರರ್ ಸೇರಿ ಹಲವು ಗಣ್ಯ ನಾಯಕರು ಬೆಯರ್ ಗ್ರಲ್ಸ್ ಜೊತೆ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.