ಪ್ರತಾಪ್ ಸಿಂಹ ಸಾಧನೆ ಪಟ್ಟಿ ಬಿಡುಗಡೆ ಮಾಡಿದ ಮೋದಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Aug 2018, 2:03 PM IST
PM Modi Releases MP Prathap Simhas Achievements
Highlights

ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಅವರ ನಾಲ್ಕು ವರ್ಷದ ಸಾಧನೆಗಳ ಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ  ಮಾಡಿದರು. 

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪಸಿಂಹ ಅವರ ನಾಲ್ಕು ವರ್ಷದ ಸಾಧನೆಯ ಪಟ್ಟಿಯನ್ನು ಬಿಡುಗಡೆಗೊಳಿಸಿದರು. 

ಬುಧವಾರ ದೆಹಲಿಯ ಪ್ರಧಾನಿ ಅವರ ಕಾರ್ಯಾಲಯದಲ್ಲಿ ಸಂಸದ ಪ್ರತಾಪಸಿಂಹ ಅವರ 4 ವರ್ಷದ ರಿಪೋರ್ಟ್ ಕಾರ್ಡ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್, ಬೀದರ್ ಸಂಸದ ಭಗವಾನ್ ಖೂಬಾ ಇದ್ದರು. 

ಮೈಸೂರಿಗೆ 10 ಸಾವಿರ ಕೋಟಿಗೂ ಹೆಚ್ಚು ಅನುದಾನದ ಯೋಜನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಾಪಸಿಂಹ ಧನ್ಯವಾದ ಅರ್ಪಿಸಿದರು.

loader