ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ರಾಷ್ಟ್ರ ಹಾಗೂ ಬಿಹಾರ ರಾಜಕಾರಣದಕಲ್ಲಿ ಸಂಚಲನವನ್ನೇ ಮೂಡಿಸಿದೆ. ನಿತೀಶ್ ರಾಜೀನಾಮೆನೀಡಿರುವ ಕ್ರಮವನ್ನು ಪ್ರಧಾನಿ ಮೋದಿ ಪ್ರಶಂಸಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ರಾಷ್ಟ್ರ ಹಾಗೂ ಬಿಹಾರ ರಾಜಕಾರಣದಕಲ್ಲಿ ಸಂಚಲನವನ್ನೇ ಮೂಡಿಸಿದೆ. ನಿತೀಶ್ ರಾಜೀನಾಮೆನೀಡಿರುವ ಕ್ರಮವನ್ನು ಪ್ರಧಾನಿ ಮೋದಿ ಪ್ರಶಂಸಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಜೊತೆಯಾಗಿದ್ದಕ್ಕೆ ನಿತೀಶ್ ಅವರಿಗೆ ಅಭಿನಂದನೆಗಳು. 125 ಕೋಟಿ ಪ್ರಜೆಗಳು ಈ ಪ್ರಾಮಾಣಿಕತೆಯನ್ನು ಸ್ವಾಗತಿಸುತ್ತಿದ್ದಾರೆ ಹಾಗೂ ಬೆಂಬಲಿಸುತ್ತಾರೆ ಎಂದು ಮೋದಿ ಟ್ವೀಟಿಸಿದ್ದಾರೆ.
ದೇಶ, ವಿಶೇಷವಾಗಿ ಬಿಹಾರದ ಉಜ್ವಲ ಭವಿಷ್ಯಕ್ಕಾಗಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಭ್ರಷ್ಟಾಚಾರದ ವಿರುದ್ಧ ಒಂದಾಗಿ ಹೋರಾಡುವ ಅಗತ್ಯವಿದೆ. ಇದು ದೇಶ ಹಾಗೂ ಸಮಯದ ಬೇಡಿಕೆಯೂ ಆಗಿದೆ ಎಂದು ಮೋದಿ ಹೆಳಿದ್ದಾರೆ.
