‘ಭಾರತದಲ್ಲಿ ಆಸ್ತಿಕರು ಮತ್ತು ನಾಸ್ತಿಕರು ಹೇಗಿದ್ದಾರೋ, ಹಾಗೇ ಮೂರ್ತಿ ಆರಾಧಕರು ಮತ್ತು ಮೂರ್ತಿ ಆರಾಧನೆ ಮಾಡದವರು ಜೊತೆಯಾಗಿ ಶಾಂತಿಯುತ ಜೀವನ ನಡೆಸುತ್ತಿದ್ದಾರೆ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಮುಸ್ಲಿಮರ ಪವಿತ್ರ ತಿಂಗಳು ರಂಜಾನ್‌ ಆರಂಭದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

‘ಭಾರತದಲ್ಲಿ ಆಸ್ತಿಕರು ಮತ್ತು ನಾಸ್ತಿಕರು ಹೇಗಿದ್ದಾರೋ, ಹಾಗೇ ಮೂರ್ತಿ ಆರಾಧಕರು ಮತ್ತು ಮೂರ್ತಿ ಆರಾಧನೆ ಮಾಡದವರು ಜೊತೆಯಾಗಿ ಶಾಂತಿಯುತ ಜೀವನ ನಡೆಸುತ್ತಿದ್ದಾರೆ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಅಂತಿಮವಾಗಿ ಎಲ್ಲ ಧರ್ಮ, ನಂಬಿಕೆ, ಸಿದ್ಧಾಂತ ಮತ್ತು ಸಂಪ್ರದಾಯಗಳು ಶಾಂತಿ, ಏಕತೆ ಮತ್ತು ಸೌಹಾರ್ದತೆಯ ಸಂದೇಶ ನೀಡಿವೆ' ಎಂದು ಮೋದಿ ಟ್ವೀಟ್‌ ಹಾಗೂ ರೇಡಿಯೋ ಭಾಷಣದಲ್ಲಿ ಹೇಳಿದ್ದಾರೆ.