ಶ್ರೀಲಂಕಾ ತಮಿಳರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆ ಇಂದು ಈಡೇರಿದೆ. ಭರವಸೆ ನೀಡಿದಂತೆ ಐತಿಹಾಸಿಕ ತಾಣಗಳಾದ ವಾರಣಾಸಿ ಮತ್ತು ಶ್ರೀಲಂಕಾ ರಾಜಧಾನಿ ಕೊಲಂಬೋ ನಡುವೆ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ.
ವಾರಣಾಸಿ (ಆ.04): ಶ್ರೀಲಂಕಾ ತಮಿಳರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆ ಇಂದು ಈಡೇರಿದೆ. ಭರವಸೆ ನೀಡಿದಂತೆ ಐತಿಹಾಸಿಕ ತಾಣಗಳಾದ ವಾರಣಾಸಿ ಮತ್ತು ಶ್ರೀಲಂಕಾ ರಾಜಧಾನಿ ಕೊಲಂಬೋ ನಡುವೆ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮೇ ನಲ್ಲಿ ಶ್ರೀಲಂಕಾಗೆ ಎರಡು ದಿನಗಳ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿರುವ ತಮಿಳರು ಹಾಗೂ ಇಲ್ಲಿನವರ ನಡುವಿನ ಸಂಬಂಧ, ಸಂಪರ್ಕ ವೃದ್ದಿಗಾಗಿ ಕೊಲಂಬೋ ಮತ್ತು ವಾರಣಾಸಿ ನಡುವೆ ಆಗಸ್ಟ್ ಒಳಗೆ ನೇರ ವಿಮಾನಯಾನ ಸಂಪರ್ಕ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಇಂದು ಅದಕ್ಕೆ ಚಾಲನೆ ಸಿಕ್ಕಿದೆ. ಏರ್ ಇಂಡಿಯಾ ಸಿಎಂಡಿ ಅಶ್ವಾನಿ ಲೋಹಾನಿ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.
ವಾರಣಾಸಿ-ಶ್ರೀಲಂಕಾ ಮಾರ್ಗದಲ್ಲಿ ನೂತನ ಏರ್ ಬಸ್ 320 ಯನ್ನು ನಿಯೋಜಿಸಲಾಗಿದೆ. ಎರಡು ವಾರಕ್ಕೊಮ್ಮೆ ವಿಮಾನಯಾನ ಸೇವೆ ಇರುತ್ತದೆ. ಶುಕ್ರವಾರ ಹಾಗೂ ಭಾನುವಾರ ವಿಮಾನ ಹಾರಾಟವಿರುತ್ತದೆ. ಏರ್ ಬಸ್ 320ಯಲ್ಲಿ ಒಟ್ಟು 180 ಆಸನಗಳಿದ್ದು, ಎಲ್ಲಾ ಆಸನಗಳು ಎಕನಾಮಿಕ್ ಕ್ಲಾಸ್’ನವೇ ಆಗಿವೆ. ಟಿಕೆಟ್ ದರ 15,000 ರೂಗಳು.
