ಪ್ರವಾದಿ ಮೊಹಮ್ಮದರ ಆದರ್ಶಗಳನ್ನು ಪಾಲಿಸುವುದು ನಮ್ಮ ಜವಾಬ್ದಾರಿ: ಪ್ರಧಾನಿ ಮೋದಿ

PM Modi Mann Ki Baat on Prophet Mohammed
Highlights

  • 43ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ
  • ಪ್ರವಾದಿ ಮೊಹಮ್ಮದರ ಆದರ್ಶಗಳನ್ನು ಕೊಂಡಾಡಿದ ಪ್ರಧಾನಿ
  • ಸಮಾನತೆ ಹಾಗೂ ಸಹೋದರತ್ವವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ
     

ನವದೆಹಲಿ:  ಪ್ರವಾದಿ ಮೊಹಮ್ಮದರ ಆದರ್ಶಗಳ ಪಾಲನೆ ನಮ್ಮೆಲ್ಲರ ಜವಾಬ್ದಾರಿಯೆಂದು ಪ್ರಧಾನಿ ಮೋದಿ ಹೇಳಿದ್ದಾರೆ. 
ಭಾನುವಾರ ’ಮನ್ ಕೀ ಬಾತ್’ನ ೪೩ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇನ್ನು ಕೆಲವೇ ದಿನಗಳಲ್ಲಿ ಪವಿತ್ರ ರಮಝಾನ್ ಮಾಸ ಆರಂಭವಾಗಲಿದೆ. ವಿಶ್ವದಾದ್ಯಂತ ಈ ತಿಂಗಳನ್ನು ಬಹಳ ಶ್ರದ್ಧೆಯೊಂದಿಗೆ ಆಚರಿಸಲಾಗುತ್ತದೆ.  ಪ್ರವಾದಿ ಮೊಹಮ್ಮದರ ಶಿಕ್ಷಣ ಹಾಗೂ ಸಂದೇಶವನ್ನು ಸ್ಮರಿಸಿಕೊಳ್ಳುವ ಸಂದರ್ಭ ಇದು.  ಅವರು ಕಲಿಸಿಕೊಟ್ಟಿರುವ ಸಮಾನತೆ ಹಾಗೂ ಸಹೋದರತ್ವವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಒಂದು ಬಾರಿ ಒಬ್ಬ ವ್ಯಕ್ತಿ ಪ್ರವಾದಿ ಬಳಿ ಬಂದು ಇಸ್ಲಾಮಿನಲ್ಲಿ ಯಾವ ಕೆಲಸ ಉತ್ತಮವಾದುದು ಎಂದು ಕೇಳುತ್ತಾನೆ. ಅದಕ್ಕೆ ಪ್ರವಾದಿಯವರು, ಬಡವರಿಗೆ ಉಣಬಡಿಸುವುದು, ಎಲ್ಲರೊಂದಿಗೆ ಸದ್ವರ್ತನೆ ತೋರುವುದು ಎಂದು ಉತ್ತರಿಸುತ್ತಾರೆ. ಪ್ರವಾದಿಯವರು ಜ್ಞಾನ ಮತ್ತು ಕರುಣೆ ಮೇಲೆ ವಿಶ್ವಾಸವಿರಿಸಿದ್ದರು. ಅವರಿಗೆ ಯಾವುದೇ ವಿಷಯದ ಅಹಂಕಾರವಿರಲಿಲ್ಲ.  ಅಹಂಕಾರವು ಜ್ಞಾನವನ್ನು ಸೋಲಿಸುತ್ತದೆ ಎಂದು ಅವರು ಹೇಳುತ್ತಿದ್ದರು, ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಬುದ್ಧ ಹಾಗೂ ಅಂಬೇಡ್ಕರ್ ಅವರನ್ನು ಕೂಡಾ ಸ್ಮರಿಸಿದ್ದಾರೆ. 

loader