ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 41 ತಿಂಗಳ ಅವಧಿಯಲ್ಲಿ 775 ಭಾಷಣ ಮಾಡಿದ್ದಾರೆ. ಮೋದಿ ಅವರು 26 ಮೇ, 2014ರಂದು ಅಧಿಕಾರ ವಹಿಸಿಕೊಂಡಾಗಿನ ದಿನದಿಂದ ಈವರೆಗೆ ತಿಂಗಳಿಗೆ ಸರಾಸರಿ 19 ಭಾಷಣಗಳನ್ನು ಮಾಡಿದ್ದಾರೆ.

ನವದೆಹಲಿ(ಅ.25): ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 41 ತಿಂಗಳ ಅವಧಿಯಲ್ಲಿ 775 ಭಾಷಣ ಮಾಡಿದ್ದಾರೆ. ಮೋದಿ ಅವರು 26 ಮೇ, 2014ರಂದು ಅಧಿಕಾರ ವಹಿಸಿಕೊಂಡಾಗಿನ ದಿನದಿಂದ ಈವರೆಗೆ ತಿಂಗಳಿಗೆ ಸರಾಸರಿ 19 ಭಾಷಣಗಳನ್ನು ಮಾಡಿದ್ದಾರೆ.

ಈ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು 10 ವರ್ಷದ ಅವಧಿಯಲ್ಲಿ 1401 ಭಾಷಣ ಮಾಡಿದ್ದರು. ಅಂದರೆ ಪ್ರತಿ ತಿಂಗಳು ಅವರು ಸರಾಸರಿ 11 ಭಾಷಣ ಮಾಡಿದಂತಾಗಿತ್ತು. 2015ರಲ್ಲಿ ಮೋದಿ ಅತಿ ಹೆಚ್ಚು ಭಾಷಣ ಮಾಡಿದ ವರ್ಷವಾಗಿದೆ. ಅವರು ಆ ವರ್ಷವೊಂದರಲ್ಲೇ 264 ಭಾಷಣಗಳನ್ನು ಮಾಡಿದ್ದರು.