ನವದೆಹಲಿ :  ರಫೇಲ್ ಯುದ್ಧ ವಿಮಾನದ ಮೂಲಕ ಲೂಟಿ ಮಾಡಿದ ಬಳಿಕ ಇದೀಗ ಬೆಳೆ ವಿಮೆ ಮೂಲಕ ಇದೀಗ ಪ್ರಧಾನಿ ನರೇಂದ್ರ ಮೋದಿ ರೈತರನ್ನು  ಲೂಟಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

ತಮ್ಮ ಗೆಳೆಯರ ಜೊತೆ ಸೇರಿಕೊಂಡು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. 

ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು ಸೂಟ್ ಬೂಟ್ ಗೆಳೆಯರ ಖಾತೆಗಳನ್ನು ಸಾವಿರಾರು ಕೋಟಿ ರು.ಗಳಿಂದ ತುಂಬುತ್ತಿದ್ದಾರೆ ಎಂದಿದ್ದಾರೆ. 

ಆದರೆ ಈ ಬಗ್ಗೆ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.  ರಪೇಲ್ ಹೆಸರಿನಲ್ಲಿ ಏರ್ ಫೋರ್ಸ್ ಲೂಟಿ ಮಾಡಿದ್ದು, ಇದೀಗ ಬೆಳೆ ಸಾಲದ ಹೆಸರಿನಲ್ಲಿ ರೈತರನ್ನು ಲೂಟಿ ಮಾಡುತ್ತಿದ್ದಾರೆ.  ಗೆಳೆಯರ ಖಾತೆ ತುಂಬಿಸಲು ಬೇರೆಯವರ ಲೂಟಿ ನಡೆಯುತ್ತಿದೆ ಸರ್ಕಾರ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.