ಅಗರ್ತಲ : ದೇಶದ ಸ್ವಾತಂತ್ರ್ಯ ಶತಮಾನೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಆಚರಣೆ ಮಾಡುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್ ಭವಿಷ್ಯ ನುಡಿದ್ದಾರೆ.  

ತ್ರಿಪುರಾದ ಅಗರ್ತಲದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಮ್ ಮಾದವ್ ದೇಶದಲ್ಲಿ  2047ರವರೆಗೆ ಬಿಜೆಪಿ ಅಧಿಕಾರದಲ್ಲಿ ಇರಲಿದೆ. ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿರಲಿದ್ದಾರೆ. ದೇಶವು ವಿಶ್ವ ಗುರು ತತ್ವದ ಮೇಲೆ ನಿಂತಿದ್ದು ಬಿಜೆಪಿ ಅಧಿಕಾರ ಮುಂದುವರಿಸುತ್ತದೆ ಎಂದು ಹೇಳಿದರು. 

ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿದಂತಹ ಕಾಂಗ್ರೆಸ್ ದಾಖಲೆಯನ್ನು ಮುರಿಯಲು ಬಿಜೆಪಿ ಸಜ್ಜಾಗಿದೆ. ಅತ್ಯಂತ ದೀರ್ಘ ಅವಧಿವರೆಗೆ ದೇಶದಲ್ಲಿ ಪಕ್ಷ ಆಡಳಿತ ನಡೆಸಲಿದೆ ಎಂದರು. 

ದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ದಾಖಲಿಸಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭಾರತದ ವರ್ತಮಾನವಾಗಿದ್ದು, ಭವಿಷ್ಯವೂ ಮೋದಿ ಜಿ ನೇತೃತ್ವದ ಬಿಜೆಪಿಯೇ ಆಗಿರಲಿದೆ. 2022ಕ್ಕೆ ಹೊಸ ಭಾರತ ನಿರ್ಮಾಣವಾಗಲಿದೆ. ಮನೆ ಇಲ್ಲದವರು, ನಿರುದ್ಯೋಗ ಸಮಸ್ಯೆ ಎಲ್ಲವೂ ಕೊನೆಯಾಗಲಿದೆ ಎಂದು ರಾಮ್ ಮಾದವ್ ಹೇಳಿದರು.