ಮನಮಾ(ಆ.25): ಬಹ್ರೇನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, 200 ವರ್ಷಗಳ ಹಳೆಯ ಶ್ರೀಕೃಷ್ಣ ದೇವಾಲಯದ ಪುನರಾಭಿವೃದ್ಧಿಗೆ ಚಾಲನೆ ನೀಡಿದ್ದಾರೆ.

ಸುಮಾರು 4.2 ಮಿಲಿಯನ್ ಡಾಲರ್ ವೆಚ್ಚದಲ್ಲಿ ಶ್ರೀಕೃಷ್ಣ ದೇವಾಲಯದ ಪುನರಾಭಿವೃದ್ಧಿ ಯೋಜನೆಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಪ್ರಧಾನಿ, ಭಾರತ-ಬಹ್ರೇನ್ ನಡುವಿನ ಸುಮಧುರ ಭಾಂಧವ್ಯಕ್ಕೆ ಶ್ರೀಕೃಷ್ಣ ಮಂದಿರ ಸಾಕ್ಷಿಯಾಗಿದ್ದು, ಇದರ ಪುನರುತ್ಥಾನಕ್ಕೆ ಚಾಲನೆ ನೀಡಿದ್ದು ತಮ್ಮ ಸೌಭಾಗ್ಯ ಎಂದು ಹೇಳಿದರು. 
 
ಬಹ್ರೇನ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದು, ಮನಾಮಾದಲ್ಲಿರುವ ಶ್ರೀನಾಥಜೀ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಗಮನ ಸೆಳೆದರು.