ಕಳೆದ ಒಂದು ವಾರದಿಂದ ಸತತವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿದ್ದ ಅರವಿಂದ್ ಕೇಜ್ರಿವಾಲ್’ಗೆ ನರೇಂದ್ರ ಮೋದಿ ಇಂದು ಪ್ರತ್ಯುತ್ತರ ನೀಡಿದ್ದಾರೆ. ಮುಂಬರಲಿರುವ ಚುನಾವಣೆಯಲ್ಲಿ ಪಂಜಾಬಿನ ಜನ ಆಮ್ ಆದ್ಮಿ ಪಕ್ಷವನ್ನು ಮನೆಗೆ ಕಳುಹಿಸಲಿದ್ದಾರೆ ಎಂದು ಟೀಕಿಸಿದ್ದಾರೆ.

ನವದೆಹಲಿ (ಜ.29): ಕಳೆದ ಒಂದು ವಾರದಿಂದ ಸತತವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿದ್ದ ಅರವಿಂದ್ ಕೇಜ್ರಿವಾಲ್’ಗೆ ನರೇಂದ್ರ ಮೋದಿ ಇಂದು ಪ್ರತ್ಯುತ್ತರ ನೀಡಿದ್ದಾರೆ. ಮುಂಬರಲಿರುವ ಚುನಾವಣೆಯಲ್ಲಿ ಪಂಜಾಬಿನ ಜನ ಆಮ್ ಆದ್ಮಿ ಪಕ್ಷವನ್ನು ಮನೆಗೆ ಕಳುಹಿಸಲಿದ್ದಾರೆ ಎಂದು ಟೀಕಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿಯಿಂದ ಪಂಜಾಬಿನ ಮಾರ್ಗ ಹಿಡಿದವರು ಮೊದಲು ದೆಹಲಿ ಜನರಿಗೆ ಮಾಡಿದ್ದ ಭರವಸೆಗಳನ್ನು ಪೂರೈಸಲಿ. ಶಿರೋಮಣಿ ಅಕಾಲಿ ದಳ-ಬಿಜೆಪಿ ಮೈತ್ರಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಪ್ರಕಾಶ್ ಸಿಂಗ್ ಬಾದಲ್ ಎದುರು ‘ಹೊರಗಿನವರು’ ನಿಲ್ಲಲು ಸಾಧ್ಯವಿಲ್ಲ ಎಂದು ಮೋದಿ ಗುಡುಗಿದ್ದಾರೆ.

ಪ್ರಕಾಶ್ ಸಿಂಗ್ ಬಾದಲ್ ಮೇಲಿರುವ ಭ್ರಷ್ಟಾಚಾರ ಆರೋಪವನ್ನು ತಳ್ಳಿ ಹಾಕಿದ ಮೋದಿ ಸರ್ಕಾರದ ಇಮೇಜನ್ನು ಹಾಳು ಮಾಡಲು ಉದ್ದೇಶಪೂರ್ವಕವಾಗಿ ಮಾಡಿದ ಕೆಲಸ ಇದು ಎಂದಿದ್ದಾರೆ.