ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ಶಶಿ ತರೂರ್! ‘ಮೋದಿ ಆರ್ ಎಸ್ ಎಸ್ ಪಾಲಿಗೆ ಶಿವಲಿಂಗದ ಚೇಳಿದ್ದಂತೆ’! ‘ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಿತಿಯನ್ನು ಮೀರಿದ್ದಾರೆ’! ‘ಮೋದಿ ಹಾಗೂ ಹಿಂದುತ್ವ ಸೇರಿ ಮೋದಿತ್ವ ಆಗಿದೆ’! ಮೋದಿ ಆರ್ ಎಸ್ ಎಸ್ ಗಿಂತ ಎತ್ತರಕ್ಕೆ ಬೆಳೆದಿದ್ದಾರೆ ಎಂದ ತರೂರ್
ಬೆಂಗಳೂರು(ಅ.28): ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್ ಪಾಲಿಗೆ ಶಿವಲಿಂಗದ ಮೇಲೆ ಕುಳಿತ ಚೇಳಿನಂತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ವ್ಯಂಗ್ಯವಡಿದ್ದಾರೆ.
ಪ್ರಧಾನಿ ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಿತಿಯನ್ನು ಮೀರಿದ್ದು, ಮೋದಿಯವರ ವ್ಯಕ್ತಿತ್ವದ ಬೆಳವಣಿಗೆಯ ರೀತಿ ಕಂಡು ಆರ್‌ಎಸ್‌ಎಸ್‌ಗೆ ನಿರಾಸೆಯಾಗಿದೆ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಶಶಿ ತರೂರ್, ಮೋದಿ ಆರ್ ಎಸ್ ಎಸ್ ಪಾಲಿಗೆ ಶಿವಲಿಂಗದಲ್ಲಿ ಕುಳಿತಿರುವ ಚೇಳಿನಂತೆ ಎಂದು ವ್ಯಂಗ್ಯವಾಗಿ ನುಡಿದರು. ನೀವು ಚೇಳನ್ನು ನೀವು ನಿಮ್ಮ ಕೈಯಿಂದ ತೆಗೆದು ಹಾಕಲು ಅಥವಾ ಚಪ್ಪಲಿಯಿಂದ ಹೊಡೆದು ಓಡಿಸಲು ಬರುವುದಿಲ್ಲ ಎಂದು ಯುವುದಕ್ಕಾಗಲಿ ಬರುವುದಿಲ್ಲ ಎಂದು ಹೇಳುವ ಮೂಲಕ ತರೂರ್ ಹೊಸ ವಿವಾದ ಸೃಷ್ಟಿಸಿದರು.
ಮೋದಿ ಹಾಗೂ ಹಿಂದುತ್ವ ಸೇರಿ ಆಗಿರುವ ಮೋದಿತ್ವವು ಆರ್‌ಎಸ್‌ಎಸ್ ಗಿಂತ ಹೆಚ್ಚು ಎತ್ತರದಲ್ಲಿ ಬೆಳೆದಿದೆ. ಕೇಂದ್ರ ಸರ್ಕಾರದ ಕೇಂದ್ರೀಕೃತ ಉನ್ನತ ಅಧಿಕಾರದಿಂದಾಗಿ ಅಧಿಕಾರಶಾಹಿ ವರ್ಗ ಪ್ರಧಾನಿ ಕಚೇರಿ ಮುಂದೆ ಕಾದು ನಿಲ್ಲಬೇಕಾಗಿದೆ ಎಂದು ತರೂರ್ ಅಭಿಪ್ರಾಯಪಟ್ಟರು.
