ಸಂಸತ್ ಅಧಿವೇಶನದಲ್ಲಿ ಕೇವಲ 3 ದಿನಗಳು ಮಾತ್ರ ಬಾಕಿ ಇದೆ. ಆದ್ರೆ ಕೊನೆಯ ಈ 3 ದಿನಗಳು ಮಹತ್ವವೆನಿಸಿವೆ. ಕಾರಣ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 3 ದಿನಗಳ ಕಾಲ ಲೋಕಸಭಾ ಕಲಾಪಕ್ಕೆ ಹಾಜರಾಗಲಿದ್ದಾರೆ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು  ತಿಳಿಸಿದ್ದಾರೆ. ನವೆಂಬರ್ 16ರಿಂದ ಅಧಿವೇಶನ ಆರಂಭವಾದಾಗಿನಿಂದಲೂ ವಿಪಕ್ಷಗಳು ವಿಪಕ್ಷಗಳು ನೋಟ್​ಬ್ಯಾನ್​ ವಿಚಾರವಾಗಿ ಪ್ರಧಾನಿ ಉತ್ತರಕ್ಕೆ ಆಗ್ರಹಿಸುತ್ತಲೇ ಬಂದಿವೆ. ಹೀಗಾಗಿ ಇಂದು ಪ್ರಧಾನಿ ಸದನದಲ್ಲಿ  ಮಾತನಾಡುವ ಸಾಧ್ಯತೆ ಇದೆ.

ನವದೆಹಲಿ(ಡಿ.14): ಸಂಸತ್ ಚಳಿಗಾಲದ ಅಧಿವೇಶನದ ಕೊನೆಯ 3 ದಿನ ಅತ್ಯಂತ ಪ್ರಮುಖವೆನಿಸಿವೆ. ಏಕೆಂದರೆ ಇಂದಿನಿಂದ 3 ದಿನಗಳ ಕಾಲ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹಾಜರಿರಲಿದ್ದು, ನೋಟ್ ಬ್ಯಾನ್ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ವಿಪಕ್ಷಗಳು ಪ್ರಧಾನಿ ವಿರುದ್ಧ ಮುಗಿಬೀಳಲು ಸಜ್ಜಾಗಿವೆ.

ಇಂದು ಅಧಿವೇಶನದಲ್ಲಿ ಭಾಗಿಯಾಗುತ್ತಾರಾ ಪ್ರಧಾನಿ?

ಸಂಸತ್ ಅಧಿವೇಶನದಲ್ಲಿ ಕೇವಲ 3 ದಿನಗಳು ಮಾತ್ರ ಬಾಕಿ ಇದೆ. ಆದ್ರೆ ಕೊನೆಯ ಈ 3 ದಿನಗಳು ಮಹತ್ವವೆನಿಸಿವೆ. ಕಾರಣ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 3 ದಿನಗಳ ಕಾಲ ಲೋಕಸಭಾ ಕಲಾಪಕ್ಕೆ ಹಾಜರಾಗಲಿದ್ದಾರೆ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ತಿಳಿಸಿದ್ದಾರೆ. ನವೆಂಬರ್ 16ರಿಂದ ಅಧಿವೇಶನ ಆರಂಭವಾದಾಗಿನಿಂದಲೂ ವಿಪಕ್ಷಗಳು ವಿಪಕ್ಷಗಳು ನೋಟ್​ಬ್ಯಾನ್​ ವಿಚಾರವಾಗಿ ಪ್ರಧಾನಿ ಉತ್ತರಕ್ಕೆ ಆಗ್ರಹಿಸುತ್ತಲೇ ಬಂದಿವೆ. ಹೀಗಾಗಿ ಇಂದು ಪ್ರಧಾನಿ ಸದನದಲ್ಲಿ ಮಾತನಾಡುವ ಸಾಧ್ಯತೆ ಇದೆ.

ಕಾಂಗ್ರೆಸ್ ಸಂಸದರಿಗೆ ವಿಪ್ ಜಾರಿ

ಇನ್ನೂ ಪ್ರಧಾನಿ ಮೋದಿ ಹಾಜರಾಗುವ ಸಾಧ್ಯತೆ ಇರೋ ಕಾರಣ ಕಾಂಗ್ರೆಸ್ ಪಕ್ಷ ದ ಸಂಸದರಿಗೆ ಕೊನೆಯ 3 ದಿನ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ವಿಪ್ ಜಾರಿ ಮಾಡಲಾಗಿದೆ. ಅಲ್ಲದೇ ಬೆಳಗ್ಗೆ 10.30ಕ್ಕೆ ನಡೆಯೋ ಸಂದೀಯ ಸಭೆಯಲ್ಲೂ ಕಾಂಗ್ರೆಸ್ ಈ ಕುರಿತ ತಂತ್ರ ರೂಪಿಸಲಿದೆ ಎನ್ನಲಾಗ್ತಿದೆ.

ಈ ಮಧ್ಯೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೋಟ್​ಬ್ಯಾನ್ ವಿಚಾರವಾಗಿ ಪ್ರಧಾನಿ ವಿರುದ್ಧ ಉತ್ತರಪ್ರದೇಶದ ದಾದ್ರಿಯಲ್ಲಿ ಮತ್ತೊಮ್ಮೆ ವಾಗ್ದಾಳಿ ನಡೆಸಿ 'ಪ್ರಧಾನಿ ಮೋದಿ ನೋಟು ನಿಷೇಧ ಮಾಡಿ ಬಡವರ ವಿರುದ್ಧ ಯುದ್ಧ ಮಾಡುತ್ತಿದ್ದಾರೆ. ಬಡವರು ಶ್ರಮಪಟ್ಟು ಗಳಿಸಿದ ಹಣವನ್ನು ಮೋದಿ ಅವರು ದರೋಡೆ ಮಾಡುತ್ತಿದ್ದಾರೆ.ಶ್ರೀಮಂತರು ಹಾಗ ಭ್ರಷ್ಠರು ಬ್ಯಾಂಕುಗಳ ಹಿಂಬಾಗಿಲಿನಿಂದ ಹಣ ಪಡೆಯುತ್ತಿದ್ದಾರೆ' ಎಂದಿದ್ದಾರೆ.

ಒಟ್ಟಿನಲ್ಲಿ ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ಕೇವಲ ನೋಟ್ ​ಗದ್ದಲದಲ್ಲೇ ಕಾಲ ಕಳೆದಿದೆ. ಇಂದು ಪ್ರಧಾನಿ ಮೋದಿ ಸದನಕ್ಕೆ ಹಾಜರಾಗಿ ವಿಪಕ್ಷಗಳ ಬಾಯಿಯನ್ನು ಹೇಗೆ ಮುಚ್ಚಿಸುತ್ತಾರೆ ಎಂಬ ಕುತೂಹಲವಿದೆ.