ಪ್ರಧಾನಿ ಮೋದಿಯವರ ನೋಟು ನಿಷೇಧ ನಿರ್ಧಾರವು ಅವರ ಆಡಳಿತಕ್ಕೆ ಅಂತ್ಯ ಹಾಡಲಿದೆ. ಮತ್ತು ಅವರೊಬ್ಬ ಹಿಂದೂ ವಿರೋಧಿ ಎಂದು ಅಖಿಲ ಭಾರತೀಯ ಮಹಾಸಭಾ ಹಿರಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಡಿ.05): ಪ್ರಧಾನಿ ಮೋದಿಯವರ ನೋಟು ನಿಷೇಧ ನಿರ್ಧಾರವು ಅವರ ಆಡಳಿತಕ್ಕೆ ಅಂತ್ಯ ಹಾಡಲಿದೆ. ಮತ್ತು ಅವರೊಬ್ಬ ಹಿಂದೂ ವಿರೋಧಿ ಎಂದು ಅಖಿಲ ಭಾರತೀಯ ಮಹಾಸಭಾ ಹಿರಿಯ ಮುಖಂಡರು
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಮದುವೆಯ ಸೀಸನ್ ಆಗಿದ್ದು, ಮುಂಚಿತವಾಗಿ ನೋಟು ನಿಷೇಧ ಘೋಷನೆಯಾಗಿದೆ. ಇದರಿಂದ ಸಾವಿರಾರು ಕುಟುಂಬದವರಿಗೆ ತೊಂದರೆಯಾಗಿದ್ದು ಸಂಬಂಧಿಕರ ಬಳಿ, ಸ್ನೇಹಿತರು, ಹಿತೈಶಿಗಳ ಬಳಿ ಸಾಲ
ಪಡೆದು ಮದುವೆ ಮಾಡಿದ್ದಾರೆ. ಕೆಲವು ಕಡೆ ಮದುವೆಯೇ ನಿಂತು ಹೋಗಿದೆ. ಇನ್ನೊಂದು ಕಡೆ ಹಿಂದುತ್ವ ಪಕ್ಷದವರು ದೇಶಾದ್ಯಂತ ಇಸ್ಲಾಮಿಕ್ ಬ್ಯಾಂಕಿಂಗ್ ನ್ನು ಪ್ರಚಾರ ಮಾಡುವಲ್ಲಿ ಬ್ಯುಸಿಯಾಗಿದ್ದರು ಎಂದು
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಹೇಳಿದ್ದಾರೆ.
