ಪ್ರಧಾನಿಯೊಂದಿಗೆ ಮಾತನಾಡುವುದೇ ಅಚ್ಚರಿ ಸಂಗತಿ

PM Modi interacts with beneficiaries of Mudra Yojana
Highlights

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವುದೇ ಅಚ್ಚರಿಯ ಸಂಗತಿ. ಜೀವನದಲ್ಲಿ ನಾನೊಬ್ಬ ಪ್ರಧಾನಿ ಮಂತ್ರಿಯೊಂದಿಗೆ ಮಾತನಾಡುತ್ತೇನೆ ಅಂದು ಕೊಂಡಿದ್ದಿಲ್ಲ. ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದು ಜೀವನ ಸಾರ್ಥಕ ಎನ್ನುವಷ್ಟು ಸಂತಸವನ್ನುಂಟು ಮಾಡಿದೆ. " ಹೀಗೆಂದು ಉದ್ಘಾರ ತೆಗೆದವರು ಮುಧೋಳದ ಯುವ ವ್ಯಾಪಾರಿ ಮಂಜುನಾಥ.

ಬಾಗಲಕೋಟೆ :  ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವುದೇ ಅಚ್ಚರಿಯ ಸಂಗತಿ. ಜೀವನದಲ್ಲಿ ನಾನೊಬ್ಬ ಪ್ರಧಾನಿ ಮಂತ್ರಿಯೊಂದಿಗೆ ಮಾತನಾಡುತ್ತೇನೆ ಅಂದು ಕೊಂಡಿದ್ದಿಲ್ಲ. ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದು ಜೀವನ ಸಾರ್ಥಕ ಎನ್ನುವಷ್ಟು ಸಂತಸವನ್ನುಂಟು ಮಾಡಿದೆ. " ಹೀಗೆಂದು ಉದ್ಘಾರ ತೆಗೆದವರು ಮುಧೋಳದ ಯುವ ವ್ಯಾಪಾರಿ ಮಂಜುನಾಥ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶದಲ್ಲಿ ಮುದ್ರಾ ಯೋಜನೆ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ವೇಳೆ ಯೋಜನಾ ಫಲಾನುಭವಿ" ಮಂಜುನಾಥ ಕೂಡ ಸಂವಾದದಲ್ಲಿ ಭಾಗವಹಿಸಿದ್ದರು.

ಮುದ್ರಾ ಯೋಜನೆ ಲಾಭದ ಕುರಿತು ರಾಜ್ಯದಿಂದ ಪ್ರಧಾನಿ ಅವರೊಂದಿಗೆ ಮಾತನಾಡಿದವರು ಮಂಜುನಾಥ ಒಬ್ಬರೆ. ಅವರು ಬಾಗಲಕೋಟೆ ಜಿಲ್ಲೆಯ ಮುಧೋಳದವರು ಎನ್ನುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿ ಆಗಿದೆ.

ಪ್ರಧಾನಿ ಅವರೊಂದಿಗೆ 6 ನಿಮಿಷ 55 ಸೆಕೆಂಡ್ ಮಾತನಾಡಿದ ಮಂಜುನಾಥ ಅವರು ಪುಳಕಿತಗೊಂಡಂತಿದ್ದರು. ಪ್ರಧಾನಿ ಅವರೊಂದಿಗೆ ಮಾತನಾಡಿರುವುದನ್ನು ಪತ್ರಿಕೆಗೆ ಹಂಚಿಕೊಂಡ ಅವರು ಪ್ರಧಾನಿ ಅವರು ನನ್ನನ್ನು ಪ್ರಶ್ನಿಸಿ ಮುದ್ರಾ ಯೋಜನೆುಂದ ಏನು ಲಾಭ ಪಡೆದುಕೊಂಡಿದ್ದೀರಿ, ಅದರಿಂದ ನೀವು ಯಾವ ಉದ್ಯೋಗ ಆರಂಭಿಸಿದ್ದೀರಿ, ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಮುದ್ರಾ ಯೋಜನೆಯಡಿ ಒಟ್ಟು ಮೂರು ಬಾರಿ ಸಾಲ ಪಡೆದುಕೊಂಡಿದ್ದು, 2015 ರಲ್ಲಿ 2 ಲಕ್ಷ ರು., 2016 ರಲ್ಲಿ 5 ಲಕ್ಷ ರು. ಮತ್ತು 2018 ರಲ್ಲಿ ಮಾರ್ಚ್ 28 ರಂದು 8 ಲಕ್ಷ ರು. ಪಡೆದುಕೊಂಡಿದ್ದು, ಮೊದಲಿನ ಎರಡೂ ಸಾಲಗಳನ್ನು ಮರು ಪಾವತಿಸಿ, 2018 ರ ಮಾರ್ಚ್‌ನಲ್ಲಿ ಪಡೆದ ಸಾಲದಲ್ಲೂ 2 ಲಕ್ಷ ರು. ಮರುಪಾವತಿಸಿರುವುದಾಗಿ ತಿಳಿಸಿದಾಗ ಪ್ರಧಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದರು ಎನ್ನುವುದನ್ನು ಅವರು ಹೆಮ್ಮೆುಂದ ಹೇಳಿಕೊಂಡರು.

ಮುಧೋಳದಲ್ಲಿ ಶ್ರೀಸಾುನಾಥ ಎಂಟರ್ ಪ್ರೈಸಿಸ್ ಆರಂಭಿಸಿದ್ದು, ನಾಲ್ಕು ಜನರಿಗೆ ಉದ್ಯೋಗ ಕೊಟ್ಟಿದ್ದೇನೆ ಎಂದಾಗ ಪ್ರಧಾನಿ ಅವರು ದೇಶಕ್ಕೆ ನಿಮ್ಮಂಥ ಯುವಕರ ಅಗತ್ಯ"ದೆ ಎಂದು ಹೇಳಿದ್ದು ಅವರಲ್ಲಿ ಅಭಿಮಾನ ಹೆಚ್ಚಿಸಿದೆ ಎಂದರು.

ಇಡೀ ದೇಶದಲ್ಲಿ "ಡಿಯೋ ಸಂವಾದದಲ್ಲಿ ಭಾಗವಹಿಸಲು ಮುದ್ರಾ ಯೋಜನೆಯ 8 ಜನ ಫಲಾನುಭ"ಗಳು ಆಯ್ಕೆಗೊಂಡಿದ್ದರು. ಆ ಪೈಕಿ 6 ಜನ ಭಾಗವಹಿಸಿದ್ದರು. ರಾಜ್ಯದಿಂದ ತಾವೊಬ್ಬರೆ ಭಾಗವಹಿಸಿದ್ದು ಹೆಮ್ಮೆಯ ಸಂಗತಿ ಎಂದು ಅವರು ತಿಳಿಸಿದರು.

loader