ಮೆಟ್ರೋ ರೈಲು ನಿಗಮ  23 ತೃತೀಯ ಲಿಂಗಿಗಳಿಗೆ ಉದ್ಯೋಗ ನೀಡಿ ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳನ್ನು ಕೆಲಸಕ್ಕೆ ನೇಮಿಸಿಕೊಂಡ ಮೊದಲ ಸರ್ಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೊಚ್ಚಿ : ಕೇರಳದ ಕೊಚ್ಚಿ ಜನತೆಯ ಮೆಟ್ರೋ ಕನಸು ಇಂದು ಸಾಕಾರಗೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊಚ್ಚಿ ಮೆಟ್ರೋವನ್ನು ಇಂದು ಉದ್ಘಾಟಿಸಿ, 10.35ಕ್ಕೆ ಪಾಲರಿವಟ್ಟಂ ಸ್ಟೇಷನ್ ನಿಂದ ಹೊಸ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿದರು.

ಮೋದಿಗೆ ನಿವೃತ್ತ ನ್ಯಾಯಮೂರ್ತಿ ಪಿ.ಸದಾಶಿವಂ, ಮುಖ್ಯಮಂತ್ರಿ ಪಿನಾರಾಯ್ ವಿಜಯನ್, ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದರು.

ಇನ್ನೂ ಮೋದಿ ಪ್ರಯಾಣಿಸುವ ಮೆಟ್ರೋ ಬೋಗಿಯನ್ನು ಕೇರಳ ಮತ್ತು ಕೊಚ್ಚಿ ಸಂಸ್ಕೃತಿ ಬಿಂಬಿಸುವ ರೀತಿ ಸಿದ್ಧಗೊಳಿಸಲಾಗಿತ್ತು.

ಕೊಚ್ಚಿಯ ಗ್ರಾಮೀಣ ಸೊಗಡಿನ ರೂಪವನ್ನು ಈ ಬೋಗಿಯಲ್ಲಿ ನೋಡಬಹುದಾಗಿದೆ. ಇನ್ನು ಮೆಟ್ರೋ ರೈಲು ನಿಗಮ 23 ತೃತೀಯ ಲಿಂಗಿಗಳಿಗೆ ಉದ್ಯೋಗ ನೀಡಿ ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳನ್ನು ಕೆಲಸಕ್ಕೆ ನೇಮಿಸಿಕೊಂಡ ಮೊದಲ ಸರ್ಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.