ಇದೇ ವರ್ಷ ಗುಜರಾತ್​ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ  ಗುಜರಾತ್​ ಚುನಾವಣೆ ಗೆಲುವು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸಮರೋಪಾದಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಜನರನ್ನು ಸೆಳೆಯಲು ಮುಂದಾಗಿದೆ. ಆಗ್ನೇಯ ಏಷ್ಯಾದಲ್ಲಿ ಹೆಗ್ಗುರುತಿನ ಯೋಜನೆಗೆ ಮೋದಿ ಇಂದು ಚಾಲನೆ ನೀಡಿ ಚುನಾವಣೆ ರಣಕಹಳೆ ಮೊಳಗಿಸಿದರು.

ಗಾಂಧಿನಗರ (ಅ.22): ಇದೇ ವರ್ಷ ಗುಜರಾತ್​ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗುಜರಾತ್​ ಚುನಾವಣೆ ಗೆಲುವು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸಮರೋಪಾದಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಜನರನ್ನು ಸೆಳೆಯಲು ಮುಂದಾಗಿದೆ. ಆಗ್ನೇಯ ಏಷ್ಯಾದಲ್ಲಿ ಹೆಗ್ಗುರುತಿನ ಯೋಜನೆಗೆ ಮೋದಿ ಇಂದು ಚಾಲನೆ ನೀಡಿ ಚುನಾವಣೆ ರಣಕಹಳೆ ಮೊಳಗಿಸಿದರು.

ಗುಜರಾತ್​ಗೆ ಬಂಪರ್​ ಕೊಡುಗೆ

ಗುಜರಾತ್​ ಚುನಾವಣೆ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರಕಾರ ಬಂಪರ್​ ಕೊಡುಗೆ ನೀಡಿದೆ. ಸೌರಾಷ್ಟ್ರದ ಘೋಘಾದಿಂದ ದಕ್ಷಿಣ ಗುಜರಾತ್’ನ ದಹೇಜ್ ಸಂಪರ್ಕಿಸುವ 'ರೋ-ರೋ' ಸಮುದ್ರಯಾನ ಸೇವೆ ಮೊದಲ ಹಂತದ ಯೋಜನೆಗೆ ಪ್ರಧಾನಿ ಮೋದಿ ನರೇಂದ್ರ ರಿಮೋಟ್​ ಕಂಟ್ರೋಲ್​ ಮೂಲಕ ಚಾಲನೆ ನೀಡಿದರು. ಗುಜರಾತ್​ನಲ್ಲಿ ಪ್ರಧಾನಿ 1140 ಕೋಟಿ ವೆಚ್ಚದ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ, "ಇದು ಆಗ್ನೇಯ ಏಷ್ಯಾದಲ್ಲಿ ಒಂದು ಹೆಗ್ಗುರುತಿನ ಯೋಜನೆ. ಈ ಬಗೆಯ ಸೇವೆ ಮೊದಲನೆಯದು. ಇದು ಗುಜರಾತ್‌ ಜನರ ಕನಸು. ನಾನು ರಾಜ್ಯ ಸರಕಾರಕ್ಕೆ ಅಭಾರಿ" ಎಂದರು.

ಪ್ರಧಾನಿಯಾದ ಮೇಲೆ ಮೋದಿ ಈವರೆಗೆ 19 ಬಾರಿ ಗುಜರಾತ್​​ಗೆ ಭೇಟಿ ನೀಡಿದ್ದಾರೆ. ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಮೋದಿ ಇದೇ ತಿಂಗಳು 3 ಬಾರಿ ಭೇಟಿ ನೀಡಿದ್ದಾರೆ. ಜತೆಗೆ ವಡೋದರಾದಲ್ಲಿ 14 ಕಿಮೀ ಭರ್ಜರಿ ರೋಡ್​ ಶೋ ನಡೆಸಿದ್ರು. ಒಟ್ಟಿನಲ್ಲಿ ಗುಜರಾತ್​ ವಿಧಾನಸಭಾ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಬಹುದೊಡ್ಡ ಸವಾಲಾಗಿದ್ದು, ಪದೇ ಪದೇ ಗುಜರಾತ್​ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ ನಡೆ ಮಾತ್ರ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.