ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭಾ ಪ್ರಶ್ನೋತ್ತರ ವೇಳೆ ಆಗಮಿಸಿದಾಗ, 'ನೋಡಿ ನೋಡಿ ಯಾರು ಬಂದರು' ಅಂತ ಪ್ರತಿಪಕ್ಷಗಳು ಅಣಕಿಸಿದಾಗ 'ಭಾರತದ ಸಿಂಹ ಆಗಮಿಸಿದೆ' ಎಂದು ಬಿಜೆಪಿಯವರು ಕೂಗಿದ  ಸ್ವಾರಸ್ಯಕರ ಘಟನೆಗೆ ರಾಜ್ಯಸಭೆ ಇಂದು ಸಾಕ್ಷಿಯಾಯಿತು. 

ನವದೆಹಲಿ (ಮಾ.16): ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭಾ ಪ್ರಶ್ನೋತ್ತರ ವೇಳೆ ಆಗಮಿಸಿದಾಗ, 'ನೋಡಿ ನೋಡಿ ಯಾರು ಬಂದರು' ಅಂತ ಪ್ರತಿಪಕ್ಷಗಳು ಅಣಕಿಸಿದಾಗ ಭಾರತದ ಸಿಂಹ ಆಗಮಿಸಿದೆ ಎಂದು ಬಿಜೆಪಿಯವರು ಕೂಗಿದ ಸ್ವಾರಸ್ಯಕರ ಘಟನೆಗೆ ರಾಜ್ಯಸಭೆ ಇಂದು ಸಾಕ್ಷಿಯಾಯಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನ ಮಂತ್ರಿ ಹಾಗೂ ಅವರ ಕಚೇರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪ್ರತಿ ಗುರುವಾರ ಕೇಳಲಾಗುತ್ತದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ರಾಜ್ಯಸಭೆಯಲ್ಲಿ ಮೊದಲ ಬಾರಿ ಪ್ರಧಾನಿ ಕಾಣಿಸಿಕೊಂಡರು. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ ಸಂಸದರು ಕೇಳಿದ ಪ್ರಶ್ನೆಗಳನ್ನು ಆಲಿಸಿದರು. 15 ನಿಮಿಷಕ್ಕೂ ಹೆಚ್ಚು ಹೊತ್ತು ಅಲ್ಲಿರದೇ ನಿರ್ಗಮಿಸಿದರು. 

ಬಳಿಕ ಕಾಂಗ್ರೆಸ್ ಸಂಸದರು ಮತ್ತು ಬಿಜೆಪಿ ಸಂಸದರ ನಡುವೆ ಮಾತಿನ ಚಕಮಕಿ ಹೆಚ್ಚಾಯಿತು. ರಾಜ್ಯಸಭಾ ಉಪಾಧ್ಯಕ್ಷ ಪಿ ಜೆ ಕುರಿಯನ್ ಅವರನ್ನು ಸಮಾಧಾನಗೊಳಿಸಿದರು.