ರುವಾಂಡಾ ಜನರಿಗೆ ಗೋದಾನ ಮಾಡಿದ ಮೋದಿಗಿರಿಂಕಾ ಕಾರ್ಯಕ್ರಮದಡಿ ಮೋದಿ ಗೋದಾನರುವಾಂಡಾ ಅಧ್ಯಕ್ಷರ ಸಮ್ಮುಖದಲ್ಲಿ ಗೋವು ಹಸ್ತಾಂತರಮೋದಿ ಗೋದಾನಕ್ಕೆ ಟ್ವಿಟ್ಟರ್‌ನಲ್ಲಿ ಕುಹುಕ
ಕಿಗಾಲಿ(ಜು.24): ಹಸುಗಳನ್ನೇ ಹೊಂದಿರದ ರುವಾಂಡಾದ ಗ್ರಾಮಸ್ಥರಿಗಾಗಿ ಪ್ರಧಾನಿ ನರೇಂದ್ರ ಮೋದಿ 200 ಗೋವುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ರುವಾಂಡಾ ಸರ್ಕಾರದ ಗಿರಿಂಕಾ ಕಾರ್ಯಕ್ರಮದಡಿ ಪ್ರಧಾನಿ ಮೋದಿ ಈ ಗೋವುಗಳನ್ನು ರುವಾಂಡಾ ಅಧ್ಯಕ್ಷ ಪೌಲ್ ಕಗಾಮೆ ಅವರ ಉಪಸ್ಥಿತಿಯಲ್ಲಿ ಗ್ರಾಮಸ್ಥರಿಗೆ ಉಡುಗೊರೆಯಾಗಿ ನೀಡಿದರು.
ರುವಾಂಡಾದ ಗ್ರಾಮೀಣ ಜನರ ಆರ್ಥಿಕಾಭಿವೃದ್ಧಿಗಾಗಿ ಭಾರತ ಗೋವುಗಳನ್ನು ಉಡುಗೊರೆಯಾಗಿ ನೀಡಿರುವುದು ಭಾರತೀಯರಿಗೆ ಅಚ್ಚರಿ ಹಾಗೂ ಸಂತಸ ಉಂಟು ಮಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ ರುವಾಂಡಾ ಗ್ರಾಮಸ್ಥರಿಗೆ ಗೋವುಗಳನ್ನು ಉಡುಗೊರೆಯಾಗಿ ನೀಡಿರುವುದನ್ನು ಟ್ವಿಟ್ಟರ್ ನಲ್ಲಿ ಕೆಲವರು ಕುಹುಕವಾಡಿದ್ದಾರೆ. ರುವಾಂಡಾದ ಜನರು ಗೋಭಕ್ಷಕರಾಗಿದ್ದು, ಮೋದಿ ತಮ್ಮ ಕೈಯಾರೆ ಭಾರತೀಯ ಗೋವುಗಳನ್ನು ಅವರಿಗೆ ತಿನ್ನಲು ಕೊಟ್ಟಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
