ದೇಶಾದ್ಯಂತ ನಗದು ರಹಿತ ಆರ್ಥಿಕತೆಯನ್ನು ನಿರ್ಮಾಣ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹಿರಿಯ ಸಚಿವರಿಗೆ ಸೂಚನೆ ನೀಡಿದ್ದಾರೆ. ಈ-ವಾಲೆಟ್ ಹಾಗೂ ಇನ್ನಿತರ ಡಿಜಿಟಲ್ ಪಾವತಿ ವಿಧಾನವನ್ನು ಜನರು ಬಳಸುವಂತೆ ಉತ್ತೇಜಿಸಿ ಎಂದು ಸಚಿವರಿಗೆ ಕರೆ ಕೊಟ್ಟಿದ್ದಾರೆ.

ನವದೆಹಲಿ (ನ.28): ದೇಶಾದ್ಯಂತ ನಗದು ರಹಿತ ಆರ್ಥಿಕತೆಯನ್ನು ನಿರ್ಮಾಣ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹಿರಿಯ ಸಚಿವರಿಗೆ ಸೂಚನೆ ನೀಡಿದ್ದಾರೆ. ಈ-ವಾಲೆಟ್ ಹಾಗೂ ಇನ್ನಿತರ ಡಿಜಿಟಲ್ ಪಾವತಿ ವಿಧಾನವನ್ನು ಜನರು ಬಳಸುವಂತೆ ಉತ್ತೇಜಿಸಿ ಎಂದು ಸಚಿವರಿಗೆ ಕರೆ ಕೊಟ್ಟಿದ್ದಾರೆ.

ಸರ್ಕಾರಿ ಮೂಲಗಳ ಪ್ರಕಾರ, ತಮ್ಮ ಸಿಬ್ಬಂದಿಗಳ ಜೊತೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಗದು ರಹಿತ ವ್ಯವಹಾರವನ್ನು ಪ್ರಚಾರ ಮಾಡಿ ಉತ್ತೇಜಿಸಿ ಎಂದು ಮೋದಿ ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ವಿತ್ತ ಸಚಿವ ಅರುಣ್ ಜೇಟ್ಲಿ, ನಗದು ರಹಿತ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಮಿತಿಯನ್ನು ರಚಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಮೋದಿ, “ ಕೆಳವರ್ಗದ ಜನರು ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಲು ಪ್ರಾರಂಭಿಸಿದ ಬಳಿಕ ರುಪೇ ಕಾರ್ಡ್ಗಳ ಬಳಕೆ ಶೇ. 300 ರಷ್ಟು ಹೆಚ್ಚಾಗಿದೆ” ಎಂದು ಹೇಳಿದ್ದಾರೆ.