ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುವಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತೇನೆಂದು ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ  ಎಂದು ಆರೋಪಿಸಿದ್ದಾರೆ.

ಶಮ್ಲಿ (ಉ.ಪ್ರ): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುವಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತೇನೆಂದು ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ರೈತರ ಆತ್ಮಹತ್ಯೆಗಳ ಬಗ್ಗೆ ಪ್ರಸ್ತಾಪಿಸುತ್ತಾ, ರೈತರ ಸಂಕಷ್ಟಗಳ ಕಡೆ ಗಮನ ನೀಡಲು ಪ್ರಧಾನಿಯವಿಗೆ ಸಮಯವಿಲ್ಲ. ತಮ್ಮ ಸಂಕಷ್ಟಗಳನ್ನು ಮೋದಿ ಆಲಿಸಿ ಬಗೆಹರಿಸುತ್ತಾರೆ ಎನ್ನುವ ನಿರೀಕ್ಷೆ ರೈತರಿಗಿದೆ. ಆದರೆ ಮೋದಿಯವರಿಗೆ ಸಮಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

SCAM ಗೆ ಹೊಸ ವ್ಯಾಖ್ಯಾನ ನೀಡಿದ ಮೋದಿಗೆ ಪ್ರತ್ಯುತ್ತರ ನೀಡುತ್ತಾ, ಸ್ಕಾಮ್ ನಲ್ಲಿ ಭಾಗಿಯಾದವರಿಗೆ ಎಲ್ಲಾ ಕಡೆಯೂ ಅದೇ ಕಾಣಿಸುತ್ತದೆ ಎಂದಿದ್ದಾರೆ.