ಉತ್ತರ ಪ್ರದೇಶ ಚುನಾವವಣೆ ಬಿಎಸ್ಪಿ, ಸಮಾಜವಾದಿ ಪಕ್ಷವನ್ನು ತೊಲಗಿಸುವ ಉತ್ಸವವಾಗಿ ಮಾರ್ಪಡಲಿದೆ ಎಂದು  ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.

ಮಿರ್ಜಾಪುರ (ಮಾ.03): ಉತ್ತರ ಪ್ರದೇಶ ಚುನಾವವಣೆ ಬಿಎಸ್ಪಿ, ಸಮಾಜವಾದಿ ಪಕ್ಷವನ್ನು ತೊಲಗಿಸುವ ಉತ್ಸವವಾಗಿ ಮಾರ್ಪಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಪ್ರದೇಶದಲ್ಲಿ ನಾವು ಸರ್ಕಾರವನ್ನು ರಚಿಸಿದ ಬಳಿಕ ರೈತರ ಸಾಲವನ್ನು ಮನ್ನಾ ಮಾಡಲಿದ್ದೇವೆ. ರಾಜ್ಯದಲ್ಲಿ ಕೃಷಿಕರ ಸಬಲೀಕರಣಗೊಳಿಸುವುದೇ ಬಿಜಿಪಿಯ ಗುರಿ. 2022 ರ ವೇಳೆಗೆ ಭಾರತ 75 ನೇ ಸ್ವತಂತ್ರ ದಿನಾಚರಣೆಯನ್ನು ಆಚರಿಸುವ ಹೊತ್ತಿಗೆ ರೈತರ ಆದಾಯವನ್ನು

ದ್ವಿಗುಣಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯನ್ನು ಎಸ್ಪಿ, ಬಿಎಸ್ಪಿ ಪಕ್ಷಗಳು ಸಂಭ್ರಮಾಚರಣೆ ಎನ್ನುವ ರೀತಿಯಲ್ಲಿ ನೋಡುತ್ತಿದ್ದಾರೆ. ಆದರೆ ಈ ಚುನಾವಣೆ ಎಸ್ಪಿ, ಬಿಎಸ್ಪಿ ಪಕ್ಷವನ್ನು ಉತ್ತರ ಪ್ರದೇಶದಿಂದ ಹೊರ ಹಾಕುವ ಸಂಭ್ರಮಾರಚರಣೆಯಾಗಲಿದೆ. ಉತ್ತರ ಪ್ರದೇಶದ ಭವಿಷ್ಯವನ್ನು ನಾವು ನಿರ್ಧರಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ.