ಯೋಗದ ಬಗ್ಗೆ ಕವನವನ್ನು ಬರೆದ ಪೊಲೀಸ್ ಅಧಿಕಾರಿ ಒಬ್ಬರನ್ನು ಪ್ರಧಾನಿ ಮೋದಿ ಅಭಿನಂದಿಸಿದ ಅಪರೂಪದ ಘಟನೆ ನಡೆದಿದೆ.

ಲಕ್ನೋ: ಯೋಗದ ಬಗ್ಗೆ ಕವನವನ್ನು ಬರೆದ ಪೊಲೀಸ್ ಅಧಿಕಾರಿ ಒಬ್ಬರನ್ನು ಪ್ರಧಾನಿ ಮೋದಿ ಅಭಿನಂದಿಸಿದ ಅಪರೂಪದ ಘಟನೆ ನಡೆದಿದೆ.

ಲಕ್ನೋ ಪೊಲೀಸ್ ಎಸ್ಐ ಕುಲದೀಪ್ ಸಿಂಗ್ ಯೋಗದಿಂದ ಸಿಗುವ ಪ್ರಯೋಜನಗಳ ಬಗ್ಗೆ ಕವನವೊಂದನ್ನು ಬರೆದಿದ್ದಾರೆ. ಯೋಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮೋದಿ ಕ್ಮವನ್ನು ಕವನದಲ್ಲಿ ಶ್ಲಾಘಿಸಿದ್ದಾರೆ.

ಕವನವನ್ನು ಮೆಚ್ಚಿದ ಪ್ರಧಾನಿ ಮೋದಿ ಇಂದು ಕುಲದೀಪ್ ಸಿಂಗರನ್ನು ಅಭಿನಂದಿಸಿದ್ದಾರೆ.