ಇರಾನ್ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಹಸನ್ ರೂಹಾನಿಗೆ ಪ್ರಧಾನಿ ಮೋದಿ ಶುಭ ಕೋರಿದ್ದಾರೆ.
ನವದೆಹಲಿ (ಮೇ.21): ಇರಾನಿನ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಚುನಾಯಿತರಾದ ಹಸನ್ ರೂಹಾನಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
ಅಧ್ಯಕ್ಷರಾಗಿ ಮರುಚುನಾಯಿತರಾದ ನನ್ನ ಸ್ನೇಹಿತ ಹಸನ್ ರೂಹಾನಿಗೆ ಮನತುಂಬಿದ ಶುಭಾಶಯಗಳು. ರೂಹಾನಿ ನೇತೃತ್ವದಲ್ಲಿ ಇರಾನ್ ಇನ್ನೂ ಹೆಚ್ಚು ಪ್ರಗತಿಹೊಂದುವುದು, ಎಂದು ಮೋದಿ ಹೇಳಿದ್ದಾರೆ.
Scroll to load tweet…
Scroll to load tweet…
ಇರಾನ್’ನೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಭಾರತವು ಬದ್ದವಾಗಿದೆಯೆಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
