ಪಾಕ್ ನಿಯೋಜಿತ ಪ್ರಧಾನಿ ಇಮ್ರಾನ್‌ಗೆ ಸೋಮವಾರ ದೂರವಾಣಿ ಕರೆ ಮಾಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಶುಭ ಹಾರೈಸಿದ್ದಾರೆ. ಜೊತೆಗೆ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮತ್ತಷ್ಟು ಬೇರುಬಿಡಲಿ ಎಂದು ಆಶಿಸಿದ್ದಾರೆ.
ಪೇಶಾವರ (ಜು. 31): ಪಾಕಿಸ್ತಾನ ಪ್ರಧಾನಿಯಾಗಿ ಆ.11 ರಂದು ಪ್ರಮಾಣ ವಚನ ಸ್ವೀಕರಿಸುವುದಾಗಿ ಪಿಟಿಐ ನಾಯಕ ಇಮ್ರಾನ್ ಖಾನ್ ಹೇಳಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ, ಇತರರ ಬೆಂಬಲ ಪಡೆದು ಸರ್ಕಾರ ರಚಿಸಲು ಖಾನ್ ಮುಂದಾಗಿದ್ದಾರೆ. ಬಹುಮತ ಸಾಬೀತಿಗೆ ಇಮ್ರಾನ್ ಪಕ್ಷಕ್ಕೆ 137 ಸ್ಥಾನದ ಬೇಕಿದ್ದು, ಇನ್ನೂ 22 ಸ್ಥಾನಗಳ ಕೊರತೆ ಇದೆ. ಇದೇ ವೇಳೆ ಪಾಕ್‌ನ ನಿಯೋಜಿತ ಪ್ರಧಾನಿ ಇಮ್ರಾನ್‌ಗೆ ಸೋಮವಾರ ದೂರವಾಣಿ ಕರೆ ಮಾಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಶುಭ ಹಾರೈಸಿದ್ದಾರೆ.
ಜೊತೆಗೆ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮತ್ತಷ್ಟು ಬೇರುಬಿಡಲಿ ಎಂದು ಆಶಿಸಿದ್ದಾರೆ. ಜೊತೆಗೆ ನೆರೆಹೊರೆಯ ಎಲ್ಲ ದೇಶಗಳ ಜೊತೆ ಶಾಂತಿ ಕಾಪಾಡುವ ಮತ್ತು ಅಭಿವೃದ್ಧಿ ಕುರಿತಾದ ತಮ್ಮ ಇರಾದೆಯನ್ನು ಮೋದಿ ಅವರು, ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
