ಪ್ರಧಾನಿ ಮೋದಿ ಆಗಮನ : ಹೇಗಿದೆ ಗೊತ್ತಾ ಭದ್ರತೆ..!

First Published 4, Feb 2018, 8:15 AM IST
PM Modi Comes To Bengaluru Today
Highlights

ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ಮಾಡಿ ದ್ದಾರೆ. ಕಳೆದ 10 ದಿನದಿಂದ ಭದ್ರತಾ ಕಾರ್ಯದ ಪರಿಶೀಲನೆ ನಡೆಸಲಾಗುತ್ತಿದ್ದು, 11 ಡಿಸಿಪಿ, 22 ಎಸಿಪಿ, 122 ಇನ್ಸ್‌ಪೆಕ್ಟರ್‌ಗಳು ಸೇರಿ 13000 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದಲ್ಲದೆ, ಮೋದಿ ಭದ್ರತೆಗಾಗಿ ದೆಹಲಿಯಿಂದ ವಿಶೇಷ ಭದ್ರತಾ ಪಡೆಯೂ ಆಗಮಿಸಿದೆ.

ಬೆಂಗಳೂರು : ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಪೊಲೀಸರು ಭಾರೀ ಬಂದೋಬಸ್ತ್ ಮಾಡಿ ದ್ದಾರೆ. ಕಳೆದ 10 ದಿನದಿಂದ ಭದ್ರತಾ ಕಾರ್ಯದ ಪರಿಶೀಲನೆ ನಡೆಸಲಾಗುತ್ತಿದ್ದು, 11 ಡಿಸಿಪಿ, 22 ಎಸಿಪಿ, 122 ಇನ್ಸ್‌ಪೆಕ್ಟರ್‌ಗಳು ಸೇರಿ 13000 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದಲ್ಲದೆ, ಮೋದಿ ಭದ್ರತೆಗಾಗಿ ದೆಹಲಿಯಿಂದ ವಿಶೇಷ ಭದ್ರತಾ ಪಡೆಯೂ ಆಗಮಿಸಿದೆ.

ಇತ್ತೀಚೆಗೆ ರಾಜ್ಯ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದ ಕರ್ನಾಟಕ-ಗೋವಾ ನಡುವಣ ಮಹದಾಯಿ ಜಲ ಸಮಸ್ಯೆ ಹಾಗೂ ಹಿಂದಿ ಹೇರಿಕೆ ವಿವಾದಗಳ ಹಿನ್ನೆಲೆಯಲ್ಲಿ ಪೊಲೀಸರು ಸಮಾವೇಶ ಸ್ಥಳದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಪ್ರದರ್ಶನ ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ. ಮಹದಾಯಿ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಗಳು ಕಪ್ಪುಬಟ್ಟೆಪ್ರದರ್ಶನ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಈ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ.

 ಮಹದಾಯಿ ಜಲ ವಿವಾದ ಇತ್ಯರ್ಥ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರಸ್ತಾವಿತ ಬೆಂಗಳೂರು ಬಂದ್ ಬದಲು ಭಾನುವಾರ ಕರಾಳ ದಿನಾಚರಣೆ ಹಮ್ಮಿಕೊಂಡಿವೆ. ಬೆಳಗ್ಗೆ 11 ಗಂಟೆಗೆ ರಾಜಧಾನಿಯ ಸ್ವಾತಂತ್ರ್ಯ ಉದ್ಯಾನ ದಿಂದ ಬಿಜೆಪಿಯ ಸಮಾವೇಶ ನಡೆಯುವ ಅರಮನೆ ಮೈದಾನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.

loader