ಪ್ರಧಾನಿ ನರೇಂದ್ರ ಮೋದಿ ಸೇವೆಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ನಿನ್ನೆ ಧರ್ಮಸ್ಥಳಕ್ಕೆ ಮೋದಿ ಭೇಟಿ ನೀಡಿದರು. ಈ ವೇಳೆ ಮೋದಿ ಕಾರ್​  ಡ್ರೈವರ್ ಮಾಡಿದ್ದು ಒಬ್ಬ ಕನ್ನಡಿಗ. ಕೇಳಲು ಆಶ್ಚರ್ಯ ಅನ್ನಿಸಿದ್ರು ಇದು ಸತ್ಯ.

ನವದೆಹಲಿ(ಅ.30): ಪ್ರಧಾನಿ ನರೇಂದ್ರ ಮೋದಿ ಸೇವೆಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ನಿನ್ನೆ ಧರ್ಮಸ್ಥಳಕ್ಕೆ ಮೋದಿ ಭೇಟಿ ನೀಡಿದರು. ಈ ವೇಳೆ ಮೋದಿ ಕಾರ್​ ಡ್ರೈವರ್ ಮಾಡಿದ್ದು ಒಬ್ಬ ಕನ್ನಡಿಗ. ಕೇಳಲು ಆಶ್ಚರ್ಯ ಅನ್ನಿಸಿದ್ರು ಇದು ಸತ್ಯ.

ಪ್ರಧಾನಿ ‌ನರೇಂದ್ರ ‌ಮೋದಿ ‌ಡ್ರೈವರ್ ‌ಕರ್ನಾಟಕ ‌ಮೂಲದ ಮಾರಪ್ಪ. ಚಾಮರಾಜನಗರ ಜಿಲ್ಲೆಯ ‌ರಾಜಪ್ಪ ‌ಮತ್ತು ‌ನಾಗರಾಜಮ್ಮ ‌ದಂಪತಿ ‌ಪುತ್ರ ಮಾರಪ್ಪ. ಈ ಮಾರಪ್ಪ. ಎಸ್ ಜಿಪಿ ‌ಸಿಬ್ಬಂದಿಯಾಗಿದ್ದು, ಹಲವು ದಿನಗಳಿಂದ ಪ್ರಧಾನಿ ಮೋದಿ ಬಳಿಯೇ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿನ್ನೆ ಕೂಡ ಪ್ರಧಾನಿ ನರೇಂದ್ರ ಮೋದಿ ಕಾರ್​ ಓಡಿಸುವ ಸಲುವಾಗಿಯೇ ‌ಡ್ರೈವರ್ ಮಾರಪ್ಪ.

ಮೊನ್ನೆಯೇ ‌ದೆಹಲಿಯಿಂದ ‌‌‌ಧರ್ಮಸ್ಥಳಕ್ಕೆ ಆಗಮಿಸಿದ್ದರು. ಮೋದಿ ಆಗಮನಕ್ಕೂ ಮುನ್ನವೇ ರಸ್ತೆ ಮಾರ್ಗದ ಸಂಪೂರ್ಣ ಮಾಹಿತಿ ಕೂಡ ಕಲೆಹಾಕಿದ್ದರಂತೆ.