ಜಿಎಸ್‌ಟಿ ಒಂದು ವರ್ಷ: ಪ್ರಧಾನಿ ಶುಭಾಶಯ

PM Modi calls GST a vibrant example of cooperative federalism
Highlights

ಜಿಎಸ್‌ಟಿ ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಉದಾಹರಣೆ

ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ಜಿಎಸ್‌ಟಿಗೆ ಒಂದು ವರ್ಷ ತುಂಬಿದ ಹಿನ್ನೆಲೆ

ದೇಶದ ಜನೆತೆಗ ಶುಭಾಶಯ ತಿಳಿಸಿದ ಪ್ರಧಾನಿ 

ನವದೆಹಲಿ(ಜು.1): ಸ್ವತಂತ್ರ ಭಾರತದ ಅತೀದೊಡ್ಡ ತೆರಿಗೆ ಸುಧಾರಣೆಯಾದ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದು ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಜಿಎಸ್ ಟಿ ಯಶಸ್ಸಿಗೆ ದೇಶದ ಜನೆತೆಗ ಧನ್ಯವಾದ ಅರ್ಪಿಸಿದ್ದಾರೆ. 

‘ಜಿಎಸ್'ಟಿ ವ್ಯವಸ್ಥೆ ಜಾರಿಗೆ ಬಂದು ಇಂದಿಗೆ 1 ವರ್ಷಗಳಾಗಿದ್ದು, ಈ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಹೇಳುತ್ತಿದ್ದೇನೆ. ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಹಾಗೂ ಭಾರತದ ಸ್ಥೈರ್ಯಕ್ಕೆ ಜಿಎಸ್'ಟಿ ಉತ್ತಮ ಉದಾಹರಣೆಯಾಗಿದೆ. ಭಾರತೀಯ ಆರ್ಥಿಕತೆಯಲ್ಲಿ ಜಿಎಸ್'ಟಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ’ ಎಂದು ಮೋದಿ ಹೇಳಿದ್ದಾರೆ.

ಸರ್ಕಾರ ಜಾರಿಗೆ ತಂದ ಜಿಎಸ್'ಟಿ ಭಾರತದ ಆರ್ಥಿಕತೆಯ ಬೆಳವಣಿಗೆ, ಸರಳತೆ ಹಾಗೂ ಪಾರದರ್ಶಕತೆಯನ್ನು ತಂದಿದೆ. ಔಪಚಾರೀಕರಣವನ್ನು ಉತ್ತೇಜನ, ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ವ್ಯಾಪಾರ ಮಾಡುವುದಕ್ಕೂ ಸುಲಭ ಮಾರ್ಗವನ್ನು ತಂದುಕೊಟ್ಟಿದೆ. ಅಲ್ಲದೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೂ ಜಿಎಸ್'ಟಿಯಿಂದ ಅನುಕೂಲವಾಗಿದೆ ಎಂದಿದ್ದಾರೆ. 

loader