ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ| ಇಂಗ್ಲೆಂಡ್‌ ಆ್ಯಷಸ್‌ ಗೆಲುವಿನ ಸುದ್ದಿ ಬ್ರಿಟನ್‌ ಪ್ರಧಾನಿಗೆ ಮೊದಲು ತಿಳಿಸಿದ್ದೇ ಮೋದಿ| 

ಬಿಯರಿಡ್ಜ್‌ [ಆ. 27]): ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ಭಾನುವಾರ ರೋಚಕವಾಗಿ ಗೆಲುವು ಸಾಧಿಸಿದ್ದು, ಇಲ್ಲಿನ ಜಿ-7 ಶೃಂಗದಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೂ ವಿಶೇಷವೆಂದರೆ ಇಂಗ್ಲೆಂಡ್‌ ಗೆಲುವಿನ ಸುದ್ದಿಯನ್ನು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸ್‌ನ್‌ ಅವರಿಗೆ ಮೊದಲು ತಿಳಿಸಿದ್ದೇ ಪ್ರಧಾನಿ ನರೇಂದ್ರ ಮೋದಿ.

ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ

ಇಂಗ್ಲೆಂಡ್‌ ಗೆಲುವಿಗಾಗಿ ಬೋಬೊರಿಸ್‌ಗೆ ಮೋದಿ ಅಭಿನಂದನೆ ಸೂಚಿಸಿದರು. ಹೀಗಾಗಿ ಕುತೂಹಲ ತಾಳಲಾರದೇ ಬೋರಿಸ್‌ ಜಾನ್ಸನ್‌ ವಿರಾಮದ ಮಧ್ಯೆ ಐಪಾಡ್‌ ತರಿಸಿಕೊಂಡು ಪಂದ್ಯದ ಹೈಲೈಟ್ಸ್‌ಗಳನ್ನು ವೀಕ್ಷಿಸಿದರು.