‘ಇನ್‌ಸ್ಟಾಗ್ರಾಂ’ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು (ಫಾಲೋವರ್ಸ್) ಹೊಂದಿದ ಜಾಗತಿಕ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲೇ ನಂ. 1 ಆಗಿ ಹೊರಹೊಮ್ಮಿದ್ದಾರೆ.

ನವದೆಹಲಿ (ಅ.14): ಸಾಮಾಜಿಕ ಮಾಧ್ಯಮವಾದ ‘ಇನ್‌ಸ್ಟಾಗ್ರಾಂ’ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು (ಫಾಲೋವರ್ಸ್) ಹೊಂದಿದ ಜಾಗತಿಕ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲೇ ನಂ. 1 ಆಗಿ ಹೊರಹೊಮ್ಮಿದ್ದಾರೆ. ಕಳೆದ ಕೆಲ ದಿನಗಳಿಂದ ಇನ್‌ಸ್ಟಾಗ್ರಾಂನಲ್ಲಿ ಮೋದಿ ಅವರ ಹಿಂಬಾಲಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿ ಇದೀಗ 3 ಕೋಟಿಗೆ ತಲುಪಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮೂಲಕ ಅವರು ನಂ. 1 ಆಗಿ ಹೊರ ಹೊಮ್ಮಿದ್ದಾರೆ. ಫೋಟೋ ಹಂಚಿಕೊಳ್ಳುವ ಸೋಷಿಯಲ್ ಮೀಡಿಯಾ ಆದ ‘ಇನ್‌ಸ್ಟಾಗ್ರಾಂ’ನಲ್ಲಿ ಮೋದಿ ನಂತರದ ಸ್ಥಾನದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೋಕೋ ವಿಡೋಡೋ ಇದ್ದು, ಅವರಿಗೆ 2.5 ಕೋಟಿ ಹಿಂಬಾಲಕರಿದ್ದಾರೆ. 

ಕಾಂಗ್ರೆಸಿಗೆ ಪ್ರಧಾನಿ ಮೋದಿ ಸವಾಲ್...

ಅಮೆರಿಕ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಸುಮಾರು 2.48 ಕೋಟಿ ಹಿಂಬಾಲಕರಿದ್ದು, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಮಾರು 1.49 ಕೋಟಿ ಫಾಲೋವರ್ಸ್ ಸಂಪಾದಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಷ್ಟೇ ಮೋದಿ ಅವರ ಟ್ವೀಟರ್ ಹಿಂಬಾಲಕರ ಸಂಖ್ಯೆ 5 ಕೋಟಿ ದಾಟಿತ್ತು. ಟ್ವೀಟರ್‌ನಲ್ಲಿ ಟ್ರಂಪ್ 6.5 ಕೋಟಿ ಹಾಗೂ ಒಬಾಮಾ ಅವರು 10.9 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ.